KARNATAKA
ಕೊರೊನಾದ ಎರಡನೇ ಡೋಸ್ ಪಡೆದರೂ ಜಿಲ್ಲಾಧಿಕಾರಿಗೆ ಕೊರೊನಾ ಸೊಂಕು
ಮೈಸೂರು: ಕೊರೊನಾ ಸೊಂಕಿಗೆ ರಾಮಬಾಣ ಎಂದು ಹೇಳಲಾಗಿರುವ ಲಸಿಕೆ ಕುರಿತು ಈಗಾಗಲೇ ಸಾರ್ವಜನಿಕರಲ್ಲಿ ಗೊಂದಲಗಳಿರುವ ಸಂದರ್ಭ ಕೊರೋನಾಗಾಗಿನ ಲಸಿಕೆಯ ಎರಡನೇ ಡೋಸ್ ಪಡೆದು 28 ದಿನಗಳ ನಂತರ, ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್.ರವಿಯವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ.
ಚಾಮರಾಜಾಗರ ಜಿಲ್ಲಾ ಡಿಎಚ್‌ಒ ಎಂಸಿ ರವಿ ಅವರ ಪ್ರಕಾರ, ಜಿಲ್ಲಾಧಿಕಾರಿ ರವಿಯವರಿಗೆ ಶನಿವಾರ ಕೊರೋನಾದ ಲಕ್ಷಣಗಳು ಕಾಣಿಸಿದೆ. ಬಳಿಕ ಸ್ವತಃ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಆ ವರದಿಯು ಭಾನುವಾರ ಬಂದಿದ್ದು ಅದರಲ್ಲಿ ಕೊರೋನಾ ಸೋಂಕು ದೃಢವಾಗಿದೆ.
ಡಿಸಿ ಫೆಬ್ರವರಿ 9ರಂದು ಕೋವಿಶೀಲ್ಡ್ ಲಸಿಕೆಯನ್ನು ತೆಗೆದುಕೊಂಡಿದ್ದು ಮಾರ್ಚ್ 8ರಂದು ಎರಡನೇ ಡೋಸ್ ಸಹ ತೆಗೆದುಕೊಂಡಿದ್ದಾರೆ.ಈಗ ಲಸಿಕೆ ತೆಗೆದುಕೊಂಡ 27 ದಿನಗಳ ನಂತರ ಅವರು ಕೊರೋನಾ ಪಾಸಿಟಿವ್ ವರದಿ ಪಡೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಡಿಎಚ್‌ಒ ವ್ಯಾಕ್ಸಿನೇಷನ್ ನಂತರ ಅದು ದೇಹದಲ್ಲಿ ತನ್ನ ಕೆಲಸ ಪ್ರಾರಂಭಿಸಲು ಒಂದು ತಿಂಗಳ ಕಾಲ ತೆಗೆದುಕೊಳ್ಲಲಿದೆ.ಜಿಲ್ಲಾಧಿಕಾರಿಗಳು ಇದೀಗ ಹೋಂ ಐಸೋಲೇಷನ್ ನಲ್ಲಿದ್ದಾರೆ ಎಂದಿದ್ದಾರೆ.