KARNATAKA
ಒಂದು ಕಾರಿನ ಮೇಲೆ ಮತ್ತೊಂದು ಕಾರು – ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ಹೈವೆ ನಲ್ಲಿ ಅಪಘಾತದ ದೃಶ್ಯ

ರಾಮನಗರ, ಫೆಬ್ರವರಿ 16: ಒಂದು ಕಾರಿನ ಮೇಲೆ ಮತ್ತೊಂದು ಕಾರು ಹತ್ತಿರುವ ದೃಶ್ಯ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಲಂಬಾಣಿ ತಾಂಡಾ ಬಳಿ ಕಾಣ ಸಿಕ್ಕಿದೆ.
ಎಕ್ಸ್ ಪ್ರೆಸ್ ಹೈವೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾರುಗಳ ಸ್ಥಿತಿ ಈ ರೀತಿ ಆಗಿದೆ. ಹೆದ್ದಾರಿಯಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆ ಸ್ವಚ್ಛಗೊಳಿಸುತ್ತಿದ್ದಾಗ ಘಟನೆ ಸಂಭವಿಸಿದೆ. ಬ್ಯಾರಿಕೇಡ್ ಗಮನಿಸದೆ ಹಠಾತ್ತಾಗಿ ಕಾರು ಚಾಲಕ ಬ್ರೇಕ್ ಹಾಕಿದ್ದಾರೆ. ಈ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಕಾರು ಡಿಕ್ಕಿಯಾಗಿ ಗುದ್ದಿದ ರಭಸಕ್ಕೆ ಇನ್ನೊಂದು ಕಾರಿನ ಮೇಲೇರಿ ಹೋಗಿದೆ. ಅದೃಷ್ಟವಶಾತ್ 2 ಕಾರುಗಳಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
