KARNATAKA
ಮೈಸೂರು: ಹಂದಿ ಜ್ವರಕ್ಕೆ 9 ತಿಂಗಳ ತುಂಬು ಗರ್ಭಿಣಿ ಬಲಿ

ಮೈಸೂರು, ಸೆಪ್ಟೆಂಬರ್ 01 : ಕೊರೊನಾ ಬಳಿಕ ರಾಜ್ಯಕ್ಕೆ ಮತ್ತೊಂದು ಕಂಟಕ ಎದುರಾಗಿದ್ದು, ಮೈಸೂರು ಜಿಲ್ಲೆಯಲ್ಲಿ 9 ತಿಂಗಳ ತುಂಬು ಗರ್ಭಿಣಿಯೊಬ್ಬರು ಹಂದಿ ಜ್ವರಕ್ಕೆ ಬಲಿಯಾದ ಘಟನೆ ಬೆಳಕಿಗೆ ಬಂದಿದೆ.
ಹುಣಸೂರು ತಾಲೂಕು ಕೋಣನಹೊಸಹಳ್ಳಿ ಗ್ರಾಮದ ಸ್ವಾಮಿನಾಯ್ಕ ಎಂಬುವರ ಪುತ್ರಿ ಛಾಯಾ ಮೃತರು, ಛಾಯಾಗೆ 4 ವರ್ಷದ ಗಂಡು ಮಗು ಇದೆ. 2ನೇ ಮಗುವಿನ ನಿರೀಕ್ಷೆಯಲ್ಲಿ ಕುಟುಂಬವಿತ್ತು.

ಇನ್ನೂ ಕೆಲವೇ ದಿನದಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ ಛಾಯಾ ಗೆ ಎಚ್1 ಎನ್1 ಸೋಂಕು ತಗುಲಿತ್ತು. ಛಾಯಾ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಗುರುವಾರ ಕೊನೆಯುಸಿರೆಳೆದಿದ್ದಾರೆ.