DAKSHINA KANNADA
ಪುತ್ತೂರು – ಹಿಂದೂ ಹಿಂದೂಗಳ ನಡುವೆ ಗಲಾಟೆ ಬೇರೆಯವರಿಗೆ ಖುಷಿ ಕೊಡುತ್ತಿದೆ – ಪ್ರಮೋದ್ ಮುತಾಲಿಕ್
ಪುತ್ತೂರು ಮೇ 20: ಬ್ಯಾನರ್ ವಿವಾದದಲ್ಲಿ ಪೊಲೀಸರಿಂದ ಹಲ್ಲೆಗೊಳಲಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದೂ ಕಾರ್ಯಕರ್ತರ ಆರೋಗ್ಯವನ್ನು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿಚಾರಿಸಿದರು.
ಪುತ್ತೂರಿಗೆ ಆಗಮಿಸಿದ ಅವರು ಆಸ್ಪತ್ರೆಗೆ ತೆರಳಿ ಪೊಲೀಸರಿಂದ ಹಲ್ಲೆಗೊಳಗಾದ ಹಿಂದೂ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪೊಲೀಸ್ ದೌರ್ಜನ್ಯವನ್ನು ಕಾಂಗ್ರೇಸ್ ಮೇಲೆ ಆರೋಪ ಹೊರಿಸಿದ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ್ ಪ್ರಭಾಕರ್ ಭಟ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದರು.
ಪುತ್ತೂರಿನಲ್ಲಿ ನಡೆದ ಈ ಘಟನೆಯನ್ನ ಕಾಂಗ್ರೆಸ್ ಮೇಲೆ ಆರೋಪ ಮಾಡೋದು ತಪ್ಪು, ಪ್ರಭಾಕರ್ ಭಟ್ ಅವರ ಮಾತು ಒಪ್ಪುವಂತದಲ್ಲ, ಯಾಕಂದ್ರೆ ಹಿಂದೂ ಕಾರ್ಯಕರ್ತರ ವಿರುದ್ಧ ಪ್ರತಿಭಟಿಸಿದ್ದು ಬಿಜೆಪಿ ಪರಾಜಿತ ಅಭ್ಯರ್ಥಿ ಮತ್ತು ಮಾಜಿ ಶಾಸಕರು, ಅವರೇ ಪ್ರತಿಭಟನೆಯಲ್ಲಿ ಹಿಂದೂ ಕಾರ್ಯಕರ್ತರಿಗೆ ಧಿಕ್ಕಾರ ಅಂತಾರೆ. ಆದ್ರೆ ಇದು ಕಾಂಗ್ರೆಸ್ ನವರು ಪ್ರತಿಭಟಿಸಿದ್ದಲ್ಲ. ಈ ಪ್ರಕರಣವನ್ನ ಮುಚ್ಚಿ ಹಾಕುವಂತ ಕೆಲಸ ಮಾಡಬೇಡಿ, ಅದು ಬಿಟ್ಟು ತಪ್ಪನ್ನ ಒಪ್ಪಿಕೊಂಡು ಸರಿಪಡಿಸುವ ಕೆಲಸ ಮಾಡಿ, ಜನರಿಗೆ ಸತ್ಯಗೊತ್ತಿದೆ, ಇನ್ನೇನೋ ಹೇಳೋಕೆ ಹೋಗಿ ಮತ್ತೆ ಅಪಹಾಸ್ಯಕ್ಕೀಡಾಗಬೇಡಿ ಎಂದು ಪ್ರಭಾಕರ್ ಭಟ್ ಗೆ ಪ್ರಮೋದ್ ಮುತಾಲಿಕ್ ಟಾಂಗ್ ನೀಡಿದ್ದಾರೆ. ಈ ಘಟನೆಗೆ ಮೂಲಕ ಕಾರಣ ಡಿವೈಎಸ್ಪಿ ಅವರು ಸಸ್ಪೆಂಡ್ ಆಗುವವರೆಗೆ ನಾವು ಹೋರಾಟ ಮಾಡುತ್ತೆವೆ ಎಂದರು.