KARNATAKA
ಮಂಗಳಾದೇವಿ ದೇವಸ್ಥಾನದಲ್ಲಿ ಧರ್ಮದಂಗಲ್ – VHP ನಿಲುವು ಸಮರ್ಥಿಸಿದ ಮುತಾಲಿಕ್ ..!
ಮಂಗಳೂರು ಮಂಗಳಾದೇವಿ ದೇವಸ್ಥಾನದಲ್ಲಿ ಧರ್ಮದಂಗಲ್ ವಿಚಾರವಾಗಿ ವಿಶ್ವ ಹಿಂದೂ ಪರಿಷತ್ ನಿಲುವನ್ನು ಶ್ರೀ ರಾಂ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸಮರ್ಥಿಸಿಕೊಂಡಿದ್ದಾರೆ.
ಉಡುಪಿ : ಮಂಗಳೂರು ಮಂಗಳಾದೇವಿ ದೇವಸ್ಥಾನದಲ್ಲಿ ಧರ್ಮದಂಗಲ್ ವಿಚಾರವಾಗಿ ವಿಶ್ವ ಹಿಂದೂ ಪರಿಷತ್ ನಿಲುವನ್ನು ಶ್ರೀ ರಾಂ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸಮರ್ಥಿಸಿಕೊಂಡಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವಸ್ಥಾನದ ಜಾತ್ರೆ ಹರಿದಿನಗಳಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಬೇಕು ಆದ್ರೆ ಆವರಣದಲ್ಲಿ ಮುಸ್ಲೀಮರಿಗೆ ಅವಕಾಶ ಕೊಟ್ಟಿರೋದು ತಪ್ಪು ಇದಕ್ಕಾಗಿ ವಿಹಿಂಪ ಹೋರಾಟಕ್ಕೆ ನನ್ನ ಬೆಂಬಲ ಇದೆ.
ಆಸ್ತಿಕತೆ ಬೇಡ, ಹಿಂದೂಗಳ ವ್ಯಾಪಾರ ಬೇಕು, ಲಾಭ ಬೇಕು ಅಂದ್ರೆ ಹೇಗೆ?ಗೋಪೂಜೆ ನಡೆಯುವ ದೇವಸ್ಥಾನದಲ್ಲಿ ಗೋಹತ್ಯೆ ಮಾಡುವವರಿಗೆ ಯಾಕೆ ಅವಕಾಶ ಎಂದು ಪ್ರಶ್ನಿಸಿದ ಮತಾಲಿಕ್ ಅಲ್ಲಾಹ್ ಒಬ್ಬನೇ ದೇವರು ಅನ್ನೋರಿಗೆ ಬಹುದೇವ ಉಪಾಸಕರ ವ್ಯಾಪಾರ ಯಾಕೆ ? ಎದು ಪ್ರಶ್ನಿಸಿದರು.
ದೇಶದ ಸುರಕ್ಷತೆ ಹಿನ್ನೆಲೆಯಲ್ಲಿ ದಯವಿಟ್ಟು ಈ ರೀತಿ ಅವಕಾಶ ಬೇಡ. ಹಿಂದೂಗಳಿಗೆ ಮಾತ್ರ ಅವಕಾಶ ನೀಡಿ.
ಹಿಂದೂ ವ್ಯಾಪಾರಿಗಳ ಮಳಿಗೆಗೆ ಕೇಸರಿ ಧ್ವಜ ಅಳವಡಿಸಿದ ಕ್ರಮನೂ ಸರಿಯಾಗಿದೆ.
ಈಗೀಗ ಮಳಿಗೆಗಳಿಗೆ ಹಿಂದೂ ಹೆಸರು ಇಟ್ಟುಕೊಂಡು ಮುಸ್ಲೀಮರು ವ್ಯಾಪಾರ ಮಾಡ್ತಾರೆ.ಹಿಂದೂಗಳು ಹಣೆ ಮೇಲೆ ಕುಂಕುಮ, ಭಸ್ಮ ಹಚ್ಚಿಕೊಂಡು ವ್ಯಾಪಾರ ಮಾಡಿ ಎಂದು ಕರೆ ನೀಡಿದರು.
ಇದನ್ನೂ ಓದಿ : ಕಾರ್ಕಳ ಪರಶುರಾಮ ಥೀಂ ಪಾರ್ಕ್ ನಕಲಿ ಪ್ರತಿಮೆ ವಿಚಾರ ತುಳುನಾಡಿನ ಸೃಷ್ಟಿಕರ್ತ ಪರಶುರಾಮನಿಗೆ ಘೋರ ಅಪಚಾರ..!
ಸಲಿಂಗಿ ಮದುವೆ ಸೃಷ್ಟಿಗೆ ವಿರುದ್ದ,ಇದು ನಾನು ಒಪ್ಪಲ್ಲ :
ಸಲಿಂಗಿ ವಿವಾಹ ಸುಪ್ರೀಂಕೋರ್ಟ್ ಇಂದು ತೀರ್ಪು ವಿಚಾರವಾಗಿ ಪ್ರತಿಕ್ರೀಯಿಸಿದ ಮುತಾಲಿಕ್ ಅತ್ಯಂತ ಅಸಹ್ಯವಾದ ಪ್ರಕ್ರಿಯೆ, ಕಾನೂನು ಮಾನ್ಯತೆ ನೀಡುವುದು ಸರಿಯಲ್ಲ ಜೊತೆಗೆ ಕೇಂದ್ರ ಸರ್ಕಾರದ ನಿಲುವು ಸರಿಯಿದೆ.
ಸೃಷ್ಟಿಯ ವಿರುದ್ದ ಕ್ರಿಯೆಗೆ ಕಾನೂನು ಮುದ್ರೆ ಸರಿಯಲ್ಲವೆಂದ ಅವರು ಮದುವೆ ಪವಿತ್ರವಾದ ಬಂಧನ, ಅದಕ್ಕೆ ಕಳಂಕ ಬೇಡ, ಬೇಕಾದಷ್ಟು ಪ್ರೀತಿ ಮಾಡಿ ಅಡ್ಡಿಯಿಲ್ಲ ಆದ್ರೆ ಸಲಿಂಗಿ ಮದುವೆ ಬೇಡ ಎಂದರು.