KARNATAKA
ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಅರೆಸ್ಟ್
ಬೆಂಗಳೂರು ಅಕ್ಟೋಬರ್ 6: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಂಬೆಳಗ್ಗೆ ದಿವಂಗತ ಮುತ್ತಪ್ಪ ರೈ ಮಗ ರಿಕ್ಕಿ ರೈ ಮನೆ ಮೇಲೆ ಸಿಸಿಬಿ ದಾಳಿ ಮಾಡಿತ್ತು. ಹೆಚ್ಚಿನ ವಿಚಾರಣೆ ಹಿನ್ನೆಲೆ ರಿಕ್ಕಿ ರೈಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಡ್ರಗ್ಸ್ ಕೇಸ್‍ನಲ್ಲಿ ಮುತ್ತಪ್ಪ ರೈ ಪುತ್ರ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ದಾಳಿ ಮಾಡಿದೆ. ಮುತ್ತಪ್ಪ ರೈ ಮಗ ರಿಕ್ಕಿ ಡ್ರಗ್ ಪೆಡ್ಲರ್ಸ್ ರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರಾಮನಗರ ಬಿಡದಿಯ ಮನೆಯಲ್ಲಿ ಸಿಸಿಬಿ ಶೋಧ ಕಾರ್ಯ ನಡೆದುತ್ತಿದೆ. ಎಸಿಬಿ ವೇಣುಗೋಪಾಲ್ ನೇತೃತ್ವದಲ್ಲಿ ರೇಡ್ ಮಾಡಲಾಗಿತ್ತು. ಡ್ರಗ್ಸ್ ಪ್ರಕರಣದ ಆರೋಪಿ ಆದಿತ್ಯ ಆಳ್ವಾ ಜೊತೆ ರಿಕ್ಕಿ ರೈ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
ಬಂಧನಕ್ಕೆ ಪಡೆದಿರುವ ರಿಕ್ಕಿ ರೈಯನ್ನು ಪೊಲೀಸರು ಮೈಸೂರಿನ ಮಾರ್ಗವಾಗಿ ಕರೆದುಕೊಂಡು ಹೋಗುತ್ತಿದ್ದಾರೆ. ಬಿಡದಿಯಲ್ಲಿ ರಿಕ್ಕಿ ರೈ ತೋಟದ ಮನೆ ಇದೆ. ಹಾಗಾಗಿ ತೋಟದ ಮನೆಯಲ್ಲಿ ಶೋಧ ನಡೆಸಲು ಪೊಲೀಸರು ಕರೆದುಕೊಂಡು ಹೋಗಲಾಗ್ತಿದೆ ಎನ್ನಲಾಗಿದೆ.
ಮುತ್ತಪ್ಪ ರೈಗೆ ಸೇರಿದ ಎರಡು ಕಡೆ ಸಿಸಿಬಿ ದಾಳಿ ಮಾಡಿದೆ. ಬಿಡದಿ ಮತ್ತು ಬೆಂಗಳೂರಿನ ವೈಯಾಲಿಕಾವಲ್ ಮನೆ ಸೇರಿದಂತೆ ವಿವಿಧ ಕಡೆಗಳಲ್ಲಿ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮುತ್ತಪ್ಪ ರೈ ಮಗ ರಿಕ್ಕಿ ಮನೆ ಮೇಲೆ ಸಿಸಿಬಿ ದಾಳಿ ಮಾಡಿದ್ದು, ಮನೆಯಲ್ಲಿ ಸಿಸಿಬಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.