DAKSHINA KANNADA
ಸ್ಕಾರ್ಫ್ ವಿಚಾರದಲ್ಲಿ ಸ್ಪಂದಿಸದ ಮುಸ್ಲಿಂ ವಿದ್ಯಾರ್ಥಿನಿಗೆ ವಿದೇಶದಿಂದ ಬೆದರಿಕೆ ಕರೆ

ಸ್ಕಾರ್ಫ್ ವಿಚಾರದಲ್ಲಿ ಸ್ಪಂದಿಸದ ಮುಸ್ಲಿಂ ವಿದ್ಯಾರ್ಥಿನಿಗೆ ವಿದೇಶದಿಂದ ಬೆದರಿಕೆ ಕರೆ
ಮಂಗಳೂರು,ಜೂನ್ 29: ಸ್ಕಾರ್ಪ್ ವಿಚಾರದಲ್ಲಿ ಜಸ್ಟೀಸ್ ಫಾರ್ ಸ್ಕಾರ್ಫ್ ಅಂಡ್ ನಮಾಝ್ ಎನ್ನುವ ವಾಟ್ಸಪ್ ಗ್ರೂಪ್ ನಲ್ಲಿ ಸ್ಪಂದಿಸಿಲ್ಲ ಎನ್ನುವ ಕಾರಣಕ್ಕಾಗಿ ಮುಸ್ಲಿಂ ವಿದ್ಯಾರ್ಥಿನಿಯೋರ್ವಳಿಗೆ ವಿದೇಶದಿಂದ ಬೆದರಿಕೆ ಕರೆ ಬಂದಿದೆ.
ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ತರಗತಿ ಒಳಗೆ ಸ್ಕಾರ್ಫ್ ಧರಿಸುವಂತಿಲ್ಲ ಎನ್ನುವ ನಿಯಮ ವಿಧಿಸಲಾಗಿದೆ. ಆದರೆ ಸ್ಕಾರ್ಫ್ ಧರಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಅಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತರು ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರನ್ನು ಸೇರಿಸಿಕೊಂಡು ಪ್ರತಿಭಟನೆ ನಡೆಸಿದ್ದರು.

ಆದರೆ ಕಾಲೇಜು ಆಡಳಿತ ಮಂಡಳಿ ಯಾವುದೇ ಪ್ರತಿಭಟನೆಗಳಿಗೆ ಮಣಿದಿರಲಿಲ್ಲ.ಈ ನಡುವೆ ಕಾಲೇಜು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ನೌರೀನ್ ತನಗೆ ವಿದೇಶದಿಂದ ಬೆದರಿಕೆ ಕರೆ ಬಂದಿದೆ ಎಂದು ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಜಸ್ಟೀಸ್ ಫಾರ್ ಸ್ಕಾರ್ಫ್ ಆಂಡ್ ನಮಾಝ್ ಎನ್ನುವ ವಾಟ್ಸಪ್ ಗ್ರೂಪ್ ನ್ಲಲಿ ಸ್ಕಾರ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆದಿತ್ತು. ತಾನು ಮಾತ್ರ ಚರ್ಚೆಗೆ ಸ್ಪಂದಿಸಿರಲಿಲ್ಲ.
ಅಲ್ಲದೆ ಚರ್ಚೆಯ ಮಧ್ಯೆಯೇ ಗ್ರೂಪ್ ನಿಂದ ಲೆಫ್ಟ್ ಆಗಿದ್ದೆ. ಆದರೆ ಇದಕ್ಕೆ ಸಂಬಂಧಿಸಿ ಅನಾಮಿಕ ವ್ಯಕ್ತಿಯೋರ್ವ ಸೌದಿಯಿಂದ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ನೌರೀನ್ ಮಾಧ್ಯಮಕ್ಕೂ ಹೇಳಿಕೆ ನೀಡಿದ್ದಾರೆ.