DAKSHINA KANNADA
ಇಸ್ಲಾಂ ಧರ್ಮದ ವಿರುದ್ಧ ಅವಹೇಳನಕಾರಿ ಭಾಷಣ: ಜಗದೀಶ್ ಕಾರಂತ್ ವಿರುದ್ಧ ಮುಸ್ಲಿಂ ಸಮುದಾಯದ ನಿಯೋಗದಿಂದ ದೂರು
ಪುತ್ತೂರು, ಮಾರ್ಚ್ 25: ಹಿಂದು ಐಕ್ಯತಾ ಸಮಾವೇಶದಲ್ಲಿ ಇಸ್ಲಾಂ ಧರ್ಮದ ವಿರುದ್ಧ ಅವಹೇಳನಕಾರಿ ಭಾಷಣ ಆರೋಪ |ಭಾಷಣಕಾರ ಮತ್ತು ಸಂಘಟಕರ ವಿರುದ್ಧ ಕೇಸು ದಾಖಲಿಸುವಂತೆ ಪೊಲೀಸರಿಗೆ ದೂರು.
ಪುತ್ತೂರಿನಲ್ಲಿ ನಡೆದ ಹಿಂದು ಐಕ್ಯತಾ ಸಮಾವೇಶದಲ್ಲಿ ಭಾಷಣಕಾರ ಜಗದೀಶ್ ಕಾರಂತರವರು ತನ್ನ ಭಾಷಣದಲ್ಲಿ ಇಸ್ಲಾಂ ಧರ್ಮದ ಬಗ್ಗೆ ಅವೆಹೇಳನಕಾರಿಯಾಗಿ ಮಾತಾನಾಡಿ ಮುಸ್ಲಿಂ ಸಮುದಾಯದ ಭಾವನೆಗೆ ಧಕ್ಕೆ ಮಾಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ದ ಕೇಸು ದಾಖಲಿಸುವಂತೆ ಪುತ್ತೂರು ಮುಸ್ಲಿಂ ಸಮುದಾಯದ ನಿಯೋಗ ಮಾ.25 ರಂದು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾರಂತರವರು ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಕುರಿತು ಪೊಲೀಸ್ ಅಧಿಕಾರಿಗಳು ಸುಮೋಟೋ ಕೇಸು ದಾಖಲಿಸುವ ಅವಕಾಶ ಇದ್ದರೂ ದಾಖಲಿಸದೆ ಅವರ ದಿವ್ಯಮೌನವು ಇಲ್ಲಿನ ಶಾಂತಿಪ್ರಿಯರಾದ ನಮಗೆ ಖೇದಕರವಾಗಿರುತ್ತದೆ, ಆದುದರಿಂದ ಕಳೆದ ಸಭೆಯಲ್ಲಿ ತೀರ್ಮಾನ ಕೈಗೊಂಡಂತೆ ಎಲ್ಲಾ ಪುತ್ತೂರಿನ ಮುಸ್ಲಿಂ ಸಮುದಾಯದ ಸಂಘ ಸಂಸ್ಥೆಯ ನಾಯಕರು ಮಸೀದಿಯ ಅಧ್ಯಕ್ಷರು ರಾಜಕೀಯ ನಾಯಕರು ವಕೀಲರ ನಿಯೋಗವು ಸೇರಿದಂತೆ ಪುತ್ತೂರು ಉಪ ಪೋಲಿಸ್ ಅಧೀಕ್ಷರಿಗೆ ಜಗದೀಶ್ ಕಾರಂತ ಮತ್ತು ಸಂಘಟಕರ ಮೇಲೆ ಕೇಸ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಮನವಿಯನ್ನು ಸಲ್ಲಿಸಲಾಗಿದೆ.