LATEST NEWS
ಅತ್ಯಾಚಾರ ಆರೋಪಿ ಅಲ್ತಾಫ್ ಪರ ಮುಸ್ಲಿಂ ಸಮುದಾಯದ ವಕೀಲರು ವಾದ ಮಾಡದಂತೆ ಮುಸ್ಲಿಂ ಸಂಘಟನೆ ಕರೆ
ಉಡುಪಿ ಅಗಸ್ಟ್ 25: ಕಾರ್ಕಳದಲ್ಲಿ ಯುವತಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ ಎಸಗಿದ ಆರೋಪಿ ಅಲ್ತಾಫ್ ವಿರುದ್ದ ಇದೀಗ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಮುಸ್ಲಿಂ ಸಂಘಟನೆಗಳು ಆತನ ಪರ ಸಮುದಾಯದ ಯಾವುದೇ ವಕೀಲರು ವಾದ ಮಾಡದಂತೆ ಕರೆ ನೀಡಿದೆ.
ಮುಸ್ಲಿಂ ಜಿಲ್ಲಾ ಒಕ್ಕೂಟದ ಮಾಜಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶರೀಫ್ ನೀಡಿರುವ ಹೇಳಿಕೆಯಲ್ಲಿ ಹಿಂದೂ ಸಹೋದರಿ ಅತ್ಯಾಚಾರ ಪ್ರಕರಣ ಖಂಡಿಸುತ್ತೇವೆ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಆಕ್ರೋಶ ಹೊರ ಹಾಕಿದೆ. ಯುವತಿಯನ್ನ ಕರೆದುಕೊಂಡು ಹೋಗಿ ಮದ್ಯದಲ್ಲಿ ಮಾದಕ ದ್ರವ್ಯ ಮಿಶ್ರಣ ಮಾಡಿ ಆಕೆಗೆ ಕುಡಿಸಿ ರೇಪ್ ಮಾಡಲಾಗಿದೆ. ಅತ್ಯಾಚಾರ ಮಾಡುವಂತ ವಿಕೃತ ಮನಸ್ಸಿನ ಕಾಮುಕ ಅಲ್ತಾಫ್ಗೆ ಕಠಿಣ ಶಿಕ್ಷೆಯಾಗಲಿ. ಕಾರ್ಕಳದಲ್ಲಿ ನಾವು ಸೌಹಾರ್ದತೆಯನ್ನ ಬಯಸುವವರು ಕಾರ್ಕಳಕ್ಕೆ ಸೌಹಾರ್ದತೆಯ ಇತಿಹಾಸವಿದೆ. ಇದುವರೆಗೂ ಕಾರ್ಕಳದಲ್ಲಿ ಸೌಹಾರ್ದತೆ ಕಾಪಾಡಿಕೊಂಡು ಬಂದಿದ್ದೇವೆ ಮುಂದೆಯೂ ಕಾಪಾಡಿಕೊಳ್ಳುತ್ತೇವೆ. ಹೊರ ಜಿಲ್ಲೆಯಿಂದ ಬಂದಂತಹ ಅಲ್ತಾಫ್ ನಂತ ವ್ಯಕ್ತಿಗಳು ಬಾಡಿಗೆ ಮನೆಯಲ್ಲಿ ಉಳಿದು ಇಂತಹ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದಾರೆ.
ಬಂಗ್ಲೆ ಗುಡ್ಡೆ ಪ್ರದೇಶದಲ್ಲಿ ಇಂತಹದೇ ಕೃತ್ಯ ಮಾಡಲು ಹೋಗಿ ಯುವಕರಿಂದ ಪೆಟ್ಟು ತಿಂದಾತ ಅಲ್ತಾಫ್. ಈ ಕೃತ್ಯ ಮಾನವ ಸಮುದಾಯಕ್ಕೆ ಮಾಡಿದಂತಹ ಅತ್ಯಾಚಾರ. ಕೇವಲ ಹಿಂದೂ ಸಮಾಜವಲ್ಲ ಪೂರ್ಣ ಸಮಾಜವೇ ಎಚ್ಚೆತ್ತುಕೊಳ್ಳಬೇಕಾದ ಪರಿಸ್ಥಿತಿ ಇದೆ. ಪ್ರಕರಣದಲ್ಲಿ ಮಾದಕ ದ್ರವ್ಯದ ಉಪಯೋಗವಾಗಿದೆ ಉಡುಪಿ ಜಿಲ್ಲೆಯಲ್ಲಿ ಮಾದಕ ದ್ರವ್ಯ ಸುಲಭದಲ್ಲಿ ಸಿಗುವಂತಿದೆ. ಮಾದಕ ದ್ರವ್ಯ ಜಾಲದ ತಂಡವನ್ನ ಪತ್ತೆ ಹಚ್ಚಿ ಅವರಿಗೂ ಕಠಿಣ ಶಿಕ್ಷೆಯನ್ನು ನೀಡಬೇಕು. ಘಟನೆ ನಡೆದ ಒಂದು ಗಂಟೆಯೊಳಗೆ ಆರೋಪಿಯನ್ನ ಪತ್ತೆ ಹಚ್ಚಿದ ಪೊಲೀಸ್ ಇಲಾಖೆಗೆ ಅಭಿನಂದನೆಗಳು. ನಾವು ನಮ್ಮ ಸಮುದಾಯದಿಂದಲೇ ಅಲ್ತಾಫ್ ನನ್ನು ಹೊರಗಿಡುವ ನಿರ್ಣಯವನ್ನು ಕೈಗೊಂಡಿದ್ದೇವೆ. ಇಂತಹ ವ್ಯಕ್ತಿಗಳು ನಮ್ಮ ಸಮುದಾಯದಲ್ಲಿದ್ದರೆ ನಮ್ಮ ಸಮುದಾಯಕ್ಕೆ ಕೆಟ್ಟ ಹೆಸರು. ಇನ್ನು ನಮ್ಮ ಸಮುದಾಯದ ಯಾವುದೇ ವಕೀಲರು ಆರೋಪಿಯ ಪರವಾಗಿ ವಾದ ಮಾಡಬಾರದು ಇದು ನಮ್ಮ ಮನವಿ. ಪೊಲೀಸ್ ಇಲಾಖೆ ಈ ಪ್ರಕರಣವನ್ನು ಕೂಲಂಕುಶವಾಗಿ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮುಸ್ಲಿಂ ಜಿಲ್ಲಾ ಒಕ್ಕೂಟದ ಮಾಜಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶರೀಫ್ ತಿಳಿಸಿದರು.
You must be logged in to post a comment Login