Connect with us

    LATEST NEWS

    ಮಂಗಳೂರು – ಶಾಲೆ ಎದುರು ಮದ್ಯಸೇವನೆ ಪ್ರಶ್ನಿಸಿದ ಯುವಕನನ್ನೆ ಮುಗಿಸಿದ ದುಷ್ಕರ್ಮಿಗಳು

    ಮಂಗಳೂರು ಡಿಸೆಂಬರ್ 14:ಶಾಲೆಯ ಆವರಣದಲ್ಲಿ ಮದ್ಯಪಾನ ಮಾಡುತ್ತಿದ್ದವರು ಪ್ರಶ್ನಿಸಿದ್ದಕ್ಕೆ ಯುವಕನನ್ನು ಚೂರಿ ಇಂದ ಇರಿದು ಕೊಲೆ ಮಾಡಿದ ಘಟನೆ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಸಾರಸ್ವತಕಾಲನಿ ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ.
    ಕೊಲೆಯಾದವನನ್ನು ಸಾರಸ್ವತ ಕಾಲನಿ ನಿವಾಸಿ ವರುಣ್ (28) ಎಂದು ಗುರುತಿಸಲಾಗಿದ್ದು, ಸ್ಥಳೀಯ ಸೂರಜ್ ಎಂಬಾತ ಕೃತ್ಯ ಎಸಗಿರುವುದಾಗಿ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

    ಕೊಲ್ಯ ಸಾರಸ್ವತ ಕಾಲನಿ ಜಾಯ್ ಲ್ಯಾಂಡ್ ಶಾಲಾ ಬಳಿ ನಿವಾಸಿ ವರುಣ್ ಗಟ್ಟಿ (28) ಕೊಲೆಯಾದ ಯುವಕನಾಗಿದ್ದಾನೆ. ಬುಧವಾರ ರಾತ್ರಿ 10.45ರ ವೇಳೆಗೆ ಜಾಯ್ ಲ್ಯಾಂಡ್ ಆಂಗ್ಲ ಮಾಧ್ಯಮ ಶಾಲೆಯ ಎದುರುಗಡೆಯ ಕಟ್ಟೆಯೊಂದರಲ್ಲಿ ಕುಳಿತು ಆರೋಪಿ ಸೂರಜ್ ಮತ್ತು ರವಿರಾಜ್ ಎಂಬವರು ಬಿಯರ್ ಕುಡಿದು ಬಾಟಲಿಯನ್ನ ರಸ್ತೆಗೆ ಎಸೆದಿದ್ದರೆನ್ನಲಾಗಿದೆ.
    ಈ ವೇಳೆ ತನ್ನ ಮನೆಯಲ್ಲಿದ್ದ ವರುಣ್ ಮತ್ತು ಆತನ ಸ್ನೇಹಿತ ಅಕ್ಷಯ್ ಶಾಲೆಯ ಮುಂದೆ ಬಿಯರ್ ಬಾಟಲಿ ಯಾಕೆ ಎಸೆಯುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಇತ್ತಂಡಗಳ ನಡುವೆ ವಾಗ್ವಾದ, ತಳ್ಳಾಟ ನಡೆದಿದ್ದು ಸೂರಜ್, ವರುಣ್ ಬೆನ್ನಿಗೆ ಹರಿತವಾದ ಆಯುಧದಿಂದ ಇರಿದಿದ್ದಾನೆ.ಗಂಭೀರ ಗಾಯಗೊಂಡ ವರುಣ್‌ ಸಮೀಪದ ತನ್ನ ಮನೆ ಕಡೆ ನಡೆದು ಹೋಗಿದ್ದು ಆತನ ಸಹೋದರ ಶರಣ್ ಮತ್ತು ಸ್ನೇಹಿತರು ತಕ್ಷಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ವರುಣ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಘಟನಾ ಸ್ಥಳದ ರಸ್ತೆಯುದ್ದಕ್ಕೂ ವರಣ್ ರಕ್ತ ಹರಿದಿದೆ.ಇರಿದು ಕೊಲೆ ಮಾಡಿದ ಸೂರಜ್ ಮತ್ತು ಆತನೊಂದಿಗಿದ್ದ ರವಿರಾಜ್ ಸಾರಸ್ವತ ಕಾಲೊನಿ ನಿವಾಸಿಗಳಾಗಿದ್ದು ಇಬ್ಬರನ್ನೂ ಕ್ಷಿಪ್ರವಾಗಿ ಉಳ್ಳಾಲ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮೃತರು ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply