Connect with us

LATEST NEWS

ಮಂಗಳೂರಿನಲ್ಲಿ ಮತ್ತೆ ಗ್ಯಾಂಗ್ ವಾರ್

ಮಂಗಳೂರಿನಲ್ಲಿ ಮತ್ತೆ ಗ್ಯಾಂಗ್ ವಾರ್

ಮಂಗಳೂರು ಜನವರಿ 22: ಮಂಗಳೂರಿನಲ್ಲಿ ಮತ್ತೆ ಗ್ಯಾಂಗ್ ವಾರ್ ನಡೆದಿದೆ. ಮಂಗಳೂರು ಹೊರವಲಯದ ತಣ್ಣೀರು ಬಾವಿ ಸಮೀಪ ಈ ಗ್ಯಾಂಗ್ ವಾರ್ ನಡೆದಿದ್ದು, ಗ್ಯಾಂಗ್ ವಾರ್ ನಲ್ಲಿ ಒರ್ವ ಬಲಿಯಾಗಿದ್ದಾನೆ.

ಮಂಗಳೂರಿನ ತಣ್ಣೀರುಬಾವಿ ಸಮೀಪ ಮನೆಯ ಟೇರೆಸ್ ಮೇಲೆ ಈ ಗ್ಯಾಂಗ್ ವಾರ್ ನಡೆದಿದ್ದು ಮೆಂಡನ್ ಗ್ಯಾಂಗ್ ನ ರೌಡಿ ಶೀಟರ್ ಭರತೇಶ್ ಮೇಲಿನ ದ್ವೇಷಕ್ಕೆ ಭರತೇಶ್ ನ ಅಣ್ಣ ಶಿವರಾಜ್ ನನ್ನು ಕೊಲೆ ಗೈಯಲಾಗಿದೆ.

ಮುಂಜಾನೆ 4.30ರಿಂದ 5.30ರ ವೇಳೆ ಈ ಕೃತ್ಯ ನಡೆದಿದ್ದು, ಶಿವರಾಜ್ ಟೆರೇಸ್‌ ಮೇಲೆ ಮಲಗಿದ್ದ ಸಂದರ್ಭ ಮೂರು ಮಂದಿಯ ತಂಡವೊಂದು ಕೊಲೆ ಮಾಡಿದೆ. ಭರತೇಶ್ ಮೇಲಿನ ಕೋಪಕ್ಕೆ ಶಿವರಾಜ್ ನ ಕೊಲೆ ನಡೆಸಲಾಗಿದೆ ಎಂದು ಶಂಕಿಸಲಾಗಿದೆ. ಮೇಲ್ನೋಟಕ್ಕೆ ಹಳೆಯ ದ್ವೇಷ ಹಿನ್ನೆಲೆಯಲ್ಲಿ ನಡೆದ ಕೊಲೆ ಎಂದು ತಿಳಿದು ಬಂದಿದೆ. ಪಣಂಬೂರು ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *