Connect with us

    LATEST NEWS

    ಮುಂಬೈ – 14 ಜನರ ಬಲಿ ಪಡೆದ ಬೃಹತ್ ಜಾಹಿರಾತು ಫಲಕ

    ಮುಂಬೈ ಮೇ 14 :ಮುಂಬೈ ನಲ್ಲಿ ಬೀಸಿದ ಬಿರುಗಾಳಿಗೆ ಅನಧಿಕೃತವಾಗಿ ಹಾಕಿದ್ದ ಬೃಹತ್ ಜಾಹಿರಾತು ಫಲಕ ಬಿದ್ದು 14 ಮಂದಿ ಸಾವನಪ್ಪಿದ್ದು 74ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಸೋಮವಾರ ವಾಣಿಜ್ಯ ನಗರಿ ಮುಂಬೈನಲ್ಲಿ ಅನಧಿಕೃತ ಬೃಹತ್ ಜಾಹೀರಾತು ಫಲಕವೊಂದು ಪೆಟ್ರೋಲ್‌ ಪಂಪ್‌ ಮೇಲೆ ಬಿದ್ದು ಸಂಭವಿಸಿದ ಅವಘಡದಲ್ಲಿ ಮೃತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ 74 ಜನ ಗಾಯಗೊಂಡಿದ್ದಾರೆ.


    ನಿನ್ನೆ ಸೋಮವಾರ ಮುಂಬೈಯಲ್ಲಿ ಸಾಯಂಕಾಲ ಹೊತ್ತಿನಲ್ಲಿ ಭಾರೀ ಧೂಳು ಬಿರುಗಾಳಿ ಮತ್ತು ಅಕಾಲಿಕ ಮಳೆ ಸುರಿಯಿತು. ಈ ಸಂದರ್ಭದಲ್ಲಿ ಭಾರೀ ಗಾಳಿಗೆ ಘಾಟ್‌ಕೋಪರ್‌ನ ಪೆಟ್ರೋಲ್ ಪಂಪ್‌ನಲ್ಲಿ 100 ಅಡಿ ಎತ್ತರದ ಅಕ್ರಮವಾಗಿ ಅಳವಡಿಸಿದ್ದ ಜಾಹೀರಾತು ಫಲಕ ಕೆಳಗೆ ಬಿದ್ದಿದೆ. ಸ್ಥಳದಲ್ಲಿದ್ದ, ಹಲವರು ಫಲಕದಡಿ ಸಿಲುಕಿಕೊಂಡಿ ದ್ದರು. ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply