UDUPI
ಉಡುಪಿಗೆ ಬಂದ ಮುಂಬೈ ರೈಲು – ಸಾಂಸ್ಥಿಕ ಕ್ವಾರಂಟೈನ್ ಗೆ ಕಳುಹಿಸಿದ ಜಿಲ್ಲಾಡಳಿತ

- ಉಡುಪಿಗೆ ಆಗಮಿಸಿದ 135 ಮಂದಿ
ಉಡುಪಿ ಜೂನ್ 4: ಕೇಂದ್ರ ಸರಕಾರ ಪ್ರಯಾಣಿಕ ರೈಲಿಗೆ ಹಸಿಲು ನಿಶಾನೆ ನೀಡಿದ ನಂತರ ಮಹಾರಾಷ್ಟ್ರದಿಂದ ಉಡುಪಿಗೆ ಇಂದು ಮೊದಲ ರೈಲು ಆಗಮಿಸಿದೆ. ಈಗಾಗಲೇ ಮಹಾರಾಷ್ಟ್ರದ ಕೊರೊನಾ ಪ್ರಕರಣಗಳಿಂದ ಹೈರಾಣಾಗಿರುವ ಉಡುಪಿಗೆ ಇದು ಮತ್ತೆ ತಲೆನೋವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮುಂಬೈ ಎರ್ನಾಕುಲಂ ಮಾರ್ಗದ ಲೋಕಮಾನ್ಯ ತಿಲಕ್ ಎಕ್ಸ್ ಪ್ರೆಸ್ ರೈಲಿನಲ್ಲಿ ಮುಂಬೈನಿಂದ ಉಡುಪಿಗೆ 135 ಜನ ಪ್ರಯಾಣಿಕರು ಇಂದು ಆಗಮಿಸಿದ್ದಾರೆ. ಮುಂಬೈನಿಂದ ಪ್ರಯಾಣಿಕರ ಆಗಮನದ ಹಿನ್ನಲೆ ಉಡುಪಿ ರೈಲ್ವೆ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಎರ್ಪಡಿಸಲಾಗಿತ್ತು.

ಮುಂಬೈನಿಂದ ಬಂದ ಎಲ್ಲರಿಗೂ ಹೋಟೆಲ್ ಕ್ವಾರಂಟೈನ್ ನಲ್ಲಿಡಲು ಜಿಲ್ಲಾಡಳಿತ ನಿರ್ಧರಿಸಿದ್ದು,ಈ ಹಿನ್ನಲೆ ರೈಲ್ವೆ ನಿಲ್ದಾಣದಲ್ಲಿದ್ದ ನೋಡಲ್ ಆಫೀಸರ್ ಗಳ ಮೂಲಕ ಎಲ್ಲಾ ಪ್ರಯಾಣಿಕರ ನೋಂದಣಿ ಮಾಡಿಕೊಳ್ಳಲಾಯಿತು. ನಂತರ ಎಲ್ಲಾ ಪ್ರಯಾಣಿಕರಿಗೆ ಕೈಗೆ ಸೀಲ್ ಹಾಕಿ ಹೋಟೆಲ್ ಕ್ವಾರಂಟೈನ್ ಗೆ ಕಳುಹಿಸಲಾಗಿದೆ.