LATEST NEWS
ಮುಂಬೈ – ಸಮೃದ್ದಿ ಎಕ್ಸ್ ಪ್ರೇಸ್ ವೇ ಕಾಮಗಾರಿ ವೇಳೆ ಕ್ರೇನ್ ಕುಸಿತ – 16 ಮಂದಿ ಸಾವು…!!

ಮುಂಬೈ ಅಗಸ್ಟ್ 01 : ರಸ್ತೆ ಕಾಮಗಾರಿ ವೇಳೆ ಕ್ರೇನ್ ಕುಸಿದು ಬಿದ್ದ ಪರಿಣಾಮ 16 ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಥಾಣೆ ಜಿಲ್ಲೆಯ ಶಹಾಪುರ ತಹಸಿಲ್‌ನ ಸರ್ಲಾಂಬೆ ಗ್ರಾಮದ ಬಳಿ ಅವಘಡ ಸಂಭವಿಸಿದೆ.
ಮುಂಬೈ– ನಾಗ್ಪುರ ಸಂಪರ್ಕಿಸುವ 701 ಕಿ.ಮೀ ಉದ್ದದ ಸಮೃದ್ಧಿ ಎಕ್ಸ್‌ಪ್ರೆಸ್ ವೇ ನಾಗ್ಪುರ, ವಾಶಿಮ್, ವಾರ್ಧಾ, ಅಹ್ಮದ್‌ನಗರ, ಬುಲ್ಧಾನ, ಔರಂಗಾಬಾದ್, ಅಮರಾವತಿ, ಜಲ್ನಾ, ನಾಸಿಕ್ ಮತ್ತು ಥಾಣೆ ಸೇರಿದಂತೆ ಹತ್ತು ಜಿಲ್ಲೆಗಳನ್ನು ಹಾದು ಹೋಗುತ್ತದೆ.

ಈ ಘಟನೆಯಲ್ಲಿ 16 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.