LATEST NEWS
ಮುಂಬೈ ಪೊಲೀಸ್ ಅಧಿಕಾರಿ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಗೆ ಮುಂಭಡ್ತಿ..!
ಮುಂಬೈ: ಮುಂಬೈ ಪೊಲೀಸ್ಅಧಿಕಾರಿ ಎನ್‌ಕೌಂಟರ್ ಸ್ಪೆಷಲಿಸ್ಟ್ ಖ್ಯಾತಿಯ ದಯಾ ನಾಯಕ್ ಅವರಿಗೆ ಸೀನಿಯರ್ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಮುಂಭಡ್ತಿ ನೀಡಲಾಗಿದೆ.
ಭೂಗತ ಜಗತ್ತಿಗೆ ಸಿಂಹಸ್ವಪ್ನರಾಗಿದ್ದ ದಯಾ ನಾಯಕ್ ಅವರು ಪ್ರಸ್ತುತ ಮುಂಬೈಯ ಬಾಂದ್ರಾ ಕ್ರೈಂ ಬ್ರಾಂಚ್‌ನಲ್ಲಿ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದೀಗ ಮುಂಬೈ ಕ್ರೈಂ ಬ್ರಾಂಚ್ ಸೀನಿಯರ್ ಇನ್ಸ್‌ಪೆಕ್ಟರ್ ಆಗಿ ಅಧಿಕಾರ ವಹಿಸಿದ್ದಾರೆ.ಕಾರ್ಕಳ ಸಮೀಪದ ಎಣ್ಣೆಹೊಳೆಯವರಾದ ದಯಾ ನಾಯಕ್ 1995ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು 2004ರ ವೇಳೆಗೆ ಮುಂಬೈ ಭೂಗತ ಲೋಕದ 85ಕ್ಕೂ ಹೆಚ್ಚು ಪಾತಕಿಗಳನ್ನು ಎನ್ ಕೌಂಟರಿನಲ್ಲಿ ಫಿನಿಶ್ ಮಾಡಿದ್ದರು. ಈ ಮೂಲಕ ಮುಂಬೈ ಜನತೆ, ಪ್ರಮುಖವಾಗಿ ಉದ್ಯಮಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಮೂರು ವರ್ಷಗಳ ಕಾಲ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳದಲ್ಲಿ ಕರ್ತವ್ಯ ಸಲ್ಲಿಸಿದ್ದ ಅವರು ಸಮಾಜ ವಿರೋಧಿ ಕೃತ್ಯವೆಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರು. ಡ್ರಗ್ಸ್‌ಗೆ ಪ್ರಕರಣಗಳಿಗೆ ಕಡಿವಾಣ ಹಾಕಿದ್ದರು.
You must be logged in to post a comment Login