Connect with us

    MANGALORE

    ಮುಲ್ಕಿ ಶ್ರೀ ವೆಂಕಟರಮಣ ದೇವರಿಗೆ ಸ್ವರ್ಣ ಗರುಡ ಸಮರ್ಪಣೆ

    ಮುಲ್ಕಿ ಶ್ರೀ ವೆಂಕಟರಮಣ ದೇವರಿಗೆ ಸ್ವರ್ಣ ಗರುಡ ಸಮರ್ಪಣೆ

    ಮಂಗಳೂರು ಮಾರ್ಚ್ 19: ಒಳಲಂಕೆ ಖ್ಯಾತಿಯ ಮುಲ್ಕಿ ಶ್ರೀ ವೆಂಕಟರಮಣ ದೇವರಿಗೆ ನೂತನವಾಗಿ ನಿರ್ಮಿಸಲಾದ ಸ್ವರ್ಣ ಗರುಡ ವಾಹನವನ್ನು ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ಸಮರ್ಪಿಸಿದರು.

    ಯುಗಾದಿ ಪ್ರಯುಕ್ತ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮ ಗಳಲ್ಲಿ ಬೆಳಿಗ್ಗೆ ನವಕ ಪ್ರಧಾನ ಹೋಮ , ಪ್ರತಿಷ್ಠಾ ಹೋಮ , ಅಭಿಷೇಕ ಪೂಜಾದಿಗಳು ವೈದಿಕರಿಂದ ನಡೆದವು ಬಳಿಕ ಚೇ೦ಪಿ ಮೊಕ್ಕಾಂ ನಿಂದ ಆಗಮಿಸಿದ ಶ್ರೀಗಳವರಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು ಶ್ರೀದೇವರ ದರ್ಶನಬಳಿಕ ಪದ ಪೂಜೆ ತದನಂತರ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಲಕ್ಷ್ಮಿ ಪೂಜೆ , ಮುಹೂರ್ತ ನೀರೀಕ್ಷಣೆ ನಡೆದವು ನೂತನವಾಗಿ ನಿರ್ಮಿಸಲಾದ ಸ್ವರ್ಣ ಗರುಡ ವಾಹನ ಸಮರ್ಪಣೆ ನೆರೆದ ಸಾವಿರಾರು ಭಜಕರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು . ರಜತ ರಥೋತ್ಸವವು ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಈ ಸಂದರ್ಭದಲ್ಲಿ ನಡೆಯಿತು.

    Share Information
    Advertisement
    Click to comment

    You must be logged in to post a comment Login

    Leave a Reply