Connect with us

  LATEST NEWS

  ದುಬಾರಿಯಾದ ಭಾರತದೊಂದಿಗಿನ ಶತ್ರುತ್ವ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಪದಚ್ಯುತಿ ಸನ್ನಿಹಿತ..!

  ಮಾಲೆ :  ಭಾರತ ವಿರೋಧಿ ನಡೆ ಅನುಸರಿಸಿ ಜೊತೆಯಲ್ಲೇ ಚೀನಾ ದೇಶದ ಪರ ಒಲವು ಹೊಂದಿರುವ ಮಾಲ್ಡೀವ್ಸ್‌ ದೇಶದ ಅಧ್ಯಕ್ಷ ಮೊಹಮ್ಮದ್ ಮುಯಿಝು ಪದಚ್ಯುತಿ ಸನ್ನಿಹಿತವಾಗಿದ್ದು ಅಜಾತ ಶತ್ರು  ಭಾರತದೊಂದಿಗಿನ ಶತ್ರುತ್ವ ಮಾಲ್ಡೀವ್ಸ್‌ ಅಧ್ಯಕ್ಷ ಮುಯಿಝು ಗೆ ದುಬಾರಿಯಾಗಿ ಪರಿಣಮಿಸಿದೆ.

  ಮಾಲ್ಡೀವ್ಸ್‌ ಸಂಸತ್‌ನಲ್ಲಿ ಮೊಹಮ್ಮದ್ ಮುಯಿಝು ಪದಚ್ಯುತಿ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗಿದೆ. ಮಾಲ್ಡೀವ್ಸ್‌ ದೇಶದ ಪ್ರಮುಖ ವಿಪಕ್ಷ ಮಾಲ್ಡೀವಿಯನ್ ಡೆಮಾಕ್ರೆಟಿಕ್ ಪಾರ್ಟಿ (ಎಂಡಿಪಿ) ಅಲ್ಲಿನ ಸಂಸತ್‌ನಲ್ಲಿ ಬಹುಮತ ಸಾಧಿಸಿದ್ದು, ಅಧ್ಯಕ್ಷ ಮೊಹಮ್ಮದ್ ಮುಯಿಝು ಪದಚ್ಯುತಿಗೆ ಸಂಸದರ ಸಹಿ ಸಂಗ್ರಹಣೆ ಆರಂಭಿಸಿದೆ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರನ್ನು ಪದಚ್ಯುತಿ ಮಾಡಲು ಅಗತ್ಯ ಪ್ರಮಾಣದ ಸಂಸದರ ಸಹಿ ಈಗಾಗಲೇ ಎಂಡಿಪಿ ಪಕ್ಷಕ್ಕೆ ಸಿಕ್ಕಿದೆ ಎನ್ನಲಾಗಿದೆ. ಹೀಗಾಗಿ, ಮಾಲ್ಡೀವ್ಸ್‌ ಸಂಸತ್‌ನಲ್ಲಿ ಶೀಘ್ರದಲ್ಲೇ ನಿರ್ಣಯ ಮಂಡನೆ ಆಗಲಿದ್ದು, ದೇಶಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
  ಮಾಲ್ಡೀವ್ಸ್‌ ಸಂಸತ್‌ನ ವಿಪಕ್ಷ ಎಂಡಿಪಿ ಹಾಗೂ ಆಡಳಿತಾರೂಢ ಡೆಮಾಕ್ರಾಟ್ಸ್‌ ಕೂಡಾ ತಮ್ಮ ಅಧ್ಯಕ್ಷ ಮೊಹಮ್ಮದ್ ಮುಯಿಝು ಪದಚ್ಯುತಿಗೆ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಒಟ್ಟು 34 ಸದಸ್ಯರ ಸಹಿ ಸಹಿತ ಸಮ್ಮತಿ ಪತ್ರ ಲಭ್ಯವಾಗಿದೆ ಅನ್ನೋ ಮಾಹಿತಿ ಇದೆ. ಹೀಗಾಗಿ, ಶೀಘ್ರದಲ್ಲೇ ಅಧ್ಯಕ್ಷರನ್ನು ಪದವಿಯಿಂದ ಉಚ್ಛಾಟಿಸಲಾಗುವುದು ಅನ್ನೋ ಮಾಹಿತಿ ಇಲ್ಲಿನ ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟ ಆಗುತ್ತಿದೆ.
  ಮಾಲ್ಡೀವ್ಸ್‌ ಸರ್ಕಾರ ಸಚಿವರನ್ನು ನೇಮಕ ಮಾಡಿ ಈ ಕುರಿತ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಈ ವೇಳೆ ಸಂಸತ್‌ನಲ್ಲಿ ಗೊಂದಲ ಏರ್ಪಟ್ಟಿತ್ತು. ಸದಸ್ಯರು ಪರಸ್ಪರ ಗುದ್ದಾಟ ನಡೆಸಿದ್ದ ವಿಡಿಯೋ ವೈರಲ್ ಆಗಿತ್ತು. ನಾಲ್ವರು ಸಚಿವರ ನೇಮಕಾತಿಗೆ ವಿರೋಧ ವ್ಯಕ್ತಪಡಿಸಿ ಸಂಸದರು ಗುದ್ದಾಡಿದ ಮಾರನೇ ದಿನವೇ ಅಧ್ಯಕ್ಷರ ಪದಚ್ಯುತಿಗೆ ವೇದಿಕೆ ಸಜ್ಜಾಗಿದೆ.
  ಭಾರತಕ್ಕೇ ಡೆಡ್‌ಲೈನ್ ಕೊಟ್ಟಿದ್ದ ಮೊಹಮ್ಮದ್ ಮುಯಿಝು!
  ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಝು ಭಾರತ ವಿರೋಧಿ ನಿಲುವನ್ನು ಪದೇ ಪದೇ ಪ್ರದರ್ಶನ ಮಾಡುತ್ತಿದ್ದರು. ಭಾರತದ ಸೇನಾ ಸಿಬ್ಬಂದಿ ಮಾಲ್ಡೀವ್ಸ್‌ನಿಂದ ಹೊರಗೆ ಹೋಗಬೇಕೆಂದು ಮೊಹಮ್ಮದ್ ಮುಯಿಝು ಬಯಸಿದ್ದರು. ಮಾರ್ಚ್‌ 15ರ ಒಳಗೆ ಭಾರತದ ಸೇನಾ ಸಿಬ್ಬಂದಿ ಮಾಲ್ಡೀವ್ಸ್‌ ಬಿಟ್ಟು ಹೋಗಬೇಕು ಎಂದು ಡೆಡ್‌ಲೈನ್ ಕೂಡಾ ಕೊಟ್ಟಿದ್ದರು. ಇನ್ನು ಮಾಲ್ಡೀವ್ಸ್‌ ಸಮೀಪದಲ್ಲೇ ಇರುವ ಲಕ್ಷದ್ವೀಪಕ್ಕೆ ಪ್ರವಾಸ ಬನ್ನಿ ಎಂದು ಪ್ರಧಾನಿ ಮೋದಿ ಅವರು ದೇಶ ವಾಸಿಗಳಿಗೆ ಕರೆ ನೀಡಿದ್ದೇ ತಡ, ಮೊಹಮ್ಮದ್ ಮುಯಿಝು ಸರ್ಕಾರದ ಸಚಿವರು ಭಾರತ ಪ್ರವಾಸೋದ್ಯಮ ವ್ಯವಸ್ಥೆ ಹಾಗೂ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಬರಹಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದರು. ಇದರ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದೇ ತಡ, ಸಚಿವರನ್ನು ಅಲ್ಲಿನ ಸರ್ಕಾರ ವಜಾ ಮಾಡಿತ್ತು. ಇತ್ತ ಭಾರತದಲ್ಲಿ ಮಾಲ್ಡೀವ್ಸ್‌ ಪ್ರವಾಸ ಬಹಿಷ್ಕರಿಸುವ ಅಭಿಯಾನವೇ ಆರಂಭ ಆಗಿತ್ತು.

  Share Information
  Advertisement
  Click to comment

  You must be logged in to post a comment Login

  Leave a Reply