Connect with us

    LATEST NEWS

    ಮಂಗಳೂರು – ಎರಡನೇ ತ್ರೈಮಾಸಿಕದಲ್ಲಿ ಎಂಆರ್ ಪಿಎಲ್ ಗೆ 683.6 ಕೋಟಿ ನಷ್ಟ

    ಮಂಗಳೂರು ಅಕ್ಟೋಬರ್ 19: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಶುಕ್ರವಾರ ಸೆಪ್ಟೆಂಬರ್ 30, 2024 ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ₹683.6 ಕೋಟಿ ನಷ್ಟವನ್ನು ವರದಿ ಮಾಡಿದೆ.


    ಹಿಂದಿನ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ, ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ₹1,059 ಕೋಟಿ ನಿವ್ವಳ ಲಾಭವನ್ನು ದಾಖಲಿಸಿದೆ ಎಂದು ಕಂಪನಿ ತಿಳಿಸಿದೆ.
    ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕಂಪನಿ ಕಾರ್ಯಾಚರಣೆಗಳಿಂದ ₹28,786 ಕೋಟಿ ವರಮಾನ ಗಳಿಸಿದೆ. ಕಳೆದ ವರ್ಷ ಈ ಅವಧಿಯಲ್ಲಿ ₹22,844 ಕೋಟಿ ವರಮಾನ ದಾಖಲಿಸಿತ್ತು.
    ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಕಾರ್ಯಾಚರಣೆಗಳ ಮೂಲಕ ಸಂಸ್ಥೆ ₹56,075 ಕೋಟಿ ವರಮಾನ ಗಳಿಸಿದೆ. ಕಳೆದ ವರ್ಷ ಈ ಅವಧಿಯಲ್ಲಿ ಕಾರ್ಯಾಚರಣೆಗಳ ಮೂಲಕ ₹47,669 ವರಮಾನ ಗಳಿಸಿತ್ತು. ಎರಡನೇ ತ್ರೈಮಾಸಿಕದಲ್ಲಿ ಬೆಂಗಳೂರು ಹೊರವಲಯದ ದೇವನಗುಂಡಿಯಲ್ಲಿ ಮಾರುಕಟ್ಟೆ ಟರ್ಮಿನಲ್ ಆರಂಭಿಸಲಾಗಿದ್ದು, ಅತಿಹೆಚ್ಚು ಕಚ್ಚಾತೈಲ ಸಂಸ್ಕರಣೆ ಮಾಡಲಾಗಿದೆ ಎಂದು ತಿಳಿಸಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *