LATEST NEWS
ಜಿಲ್ಲೆಗೆ ಬರುವ ಪೊಲೀಸ್ ಅಧಿಕಾರಿಗಳು ಒಂದೊಂದು ಸ್ಟೈಲ್ ನಲ್ಲಿ ಆಡಳಿತ ಮಾಡುತ್ತಾರೆ – ಸ್ಪೀಕರ್ ಖಾದರ್

ಮಂಗಳೂರು ಜೂನ್ 12: ದ.ಕ. ಜಿಲ್ಲೆಯಲ್ಲಿ ನಡೆದಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಹಿಂದೆ ಇದ್ದ ಪೊಲೀಸ್ ಕಮಿಷನರ್ ಹಾಗೂ ಎಸ್ಪಿ ವಿರುದ್ಧ ಉನ್ನತ ಮಟ್ಟದ ತನಿಖೆ ಆಗಬೇಕು. ಈ ಬಗ್ಗೆ ಗೃಹ ಸಚಿವರಿಗೆ ಪತ್ರ ಬರೆದು ಒತ್ತಾಯ ಮಾಡುವುದಾಗಿ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳೂರಲ್ಲಿ ಮಾತನಾಡಿದ ಅವರು, ದ್ವೇಷ ಭಾಷಣ, ಗಲಾಟೆ ಆದಾಗ ಒಬ್ಬೊಬ್ಬರು ಒಂದೊಂದು ರೀತಿ ಆಡಳಿತ ಮಾಡುತ್ತಾರೆ. ಹಜ್ ಯಾತ್ರೆಗೆ ಹೋಗುವ ಮುನ್ನ ಕಮೀಷನರ್, ಎಸ್ಪಿಗೂ ಹೇಳಿದ್ದೆ. ದ್ವೇಷ ಭಾಷಣ, ಪ್ರಚೋದನಕಾರಿ ಬರಹ ಬರೆಯುವವರ ವಿರುದ್ದ ಕ್ರಮ ಕೈಗೊಳ್ಳೋಕೆ ಹೇಳಿದ್ದೆ. ಆಗ ಅವರು ಅಸಹಾಯಕತೆ ವ್ಯಕ್ತಪಡಿಸಿದ್ದರು, ಕಾನೂನು ಸರಳ ಅಂತಾ ಎಲ್ಲಾ ಹೇಳಿದ್ರು. ಆಗ ನೀವು ಪೊಲೀಸರ ಕೆಲಸ ಮಾಡಿ, ಲಾಯರ್, ಜಡ್ಜ್ ಕೆಲಸ ಮಾಡಬೇಡಿ ಅಂತಾ ಹೇಳಿದ್ದೆ. ಈಗ ನೂತನವಾಗಿ ಬಂದವರು ಕಠಿಣ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.

ಬ್ಯಾಂಕ್ ದರೋಡೆ, ಡ್ರಗ್ಸ್,ಗಾಂಜಾ ಮಾಫಿಯವನ್ನು ಮಟ್ಟ ಹಾಕುವ ಕೆಲಸವನ್ನು ಮಂಗಳೂರು ಪೊಲೀಸರು ಮಾಡಿದ್ದರು, ಆಗ ಉತ್ತಮವಾದ ಕೆಲಸವನ್ನು ನಾವು ಮೆಚ್ಚಿದ್ದೆವು. ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಬರಹ ಬರುವಾಗ ಒಬ್ಬೊಬ್ಬ ಅಧಿಕಾರಿಯ ಒಂದೊಂದು ರೀತಿಯ ಕ್ರಮ ಯಾಕೆ?, ಹಿಂದಿನ ಅಧಿಕಾರಿಗಳು ಮತ್ತು ಈಗಿನ ಅಧಿಕಾರಿಗಳ ನಡುವಿನ ಕಾರ್ಯವೈಖರಿ ಬದಲಾಗಿಲ್ವಾ?, ಅದರ ಅನುಭವ ಜಿಲ್ಲೆಯ ಎಲ್ಲಾ ಜನರಿಗೆ ಆಗಿದೆ, ನಿಕಟಪೂರ್ವ ಎಸ್ಪಿ ಯತೀಶ್,ಕಮೀಷನರ್ ಅನುಪಮ್ ಅಗರ್ವಾಲ್ ವಿರುದ್ಧ ಕಿಡಿಕಾರಿದರು.