LATEST NEWS
ಕುಸಿತ ಕಂಡ ಎಂಆರ್ ಪಿಎಲ್ ಕಂಪೆನಿಯ ಲಾಭ
ಮಂಗಳೂರು ಜುಲೈ 23: ಎಂಆರ್ ಪಿಎಲ್ ನ 2024-25ನೇ ಹಣಕಾಸಿನ ವರ್ಷದ ಪ್ರಥಮ ತ್ರೈಮಾಸಿಕ ಲಾಭ ಗಣನೀಯವಾಗಿ ಕಡಿಮೆಯಾಗಿದೆ. ಇಲ್ಲಿ ಸೋಮವಾರ ನಡೆದ ಕಂಪನಿಯ ಆಡಳಿತ ಮಂಡಳಿ ಸಭೆಯಲ್ಲಿ ಪ್ರಥಮ ತ್ರೈಮಾಸಿಕ ವರದಿಗೆ ಅನುಮೋದನೆ ನೀಡಲಾಯಿತು.
2024-25 ರ ಮೊದಲ ತ್ರೈಮಾಸಿಕದಲ್ಲಿ ₹ 65.57 ಕೋಟಿ ತೆರಿಗೆಯ ನಂತರದ ಲಾಭವನ್ನು ದಾಖಲಿಸಿದೆ, 2023-24 ರ ಅನುಗುಣವಾದ ಅವಧಿಯಲ್ಲಿ ₹ 1,012.74 ಕೋಟಿ ತೆರಿಗೆಯ ನಂತರದ ಲಾಭವು 93.53 ರಷ್ಟು ಕಡಿಮೆಯಾಗಿದೆ.
ಕಂಪನಿಯು ಪ್ರಥಮ ತ್ರೈಮಾಸಿಕದಲ್ಲಿ ಕಾರ್ಯಾಚರಣೆಯಿಂದ ಒಟ್ಟು ₹27,289 ಕೋಟಿ ಗಳಿಸಿದೆ. 2023–24ನೇ ಸಾಲಿನಲ್ಲಿ ಕಂಪನಿ ₹24,825 ಕೋಟಿ ವರಮಾನ ಗಳಿಸಿತ್ತು. ಕಂಪನಿಯು ಕಚ್ಚಾ ತೈಲದ ಪ್ರತಿ ಬ್ಯಾರೆಲ್‌ಗೆ ₹393.18 ನಿವ್ವಳ ಸಂಸ್ಕರಣಾ ಲಾಭಾಂಶ ಗಳಿಸಿದೆ. ಕಳೆದ ವರ್ಷ ಇದು ಪ್ರತಿ ಬ್ಯಾರೆಲ್ ಕಚ್ಚಾ ತೈಲಕ್ಕೆ ₹820.65 ಇತ್ತು. 2024ರ ಮೇ ತಿಂಗಳಲ್ಲಿ ಕಂಪನಿಯು 15.93 ಲಕ್ಷ ಟನ್ ಕಚ್ಚಾ ತೈಲವನ್ನು ಸಂಸ್ಕರಿಸಿದೆ. ಇದು ಕಂಪನಿಯ ಇದುವರೆಗಿನ ಗರಿಷ್ಠ ಸಾಧನೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 15.57 ಲಕ್ಷ ಟನ್ ಕಚ್ಚಾ ತೈಲವನ್ನು ಸಂಸ್ಕರಿಸಿತ್ತು. ಮೇ ತಿಂಗಳಲ್ಲಿ ಕಂಪನಿಯು 2.30 ಲಕ್ಷ ಟನ್ ವಿಮಾನ ಇಂಧನವನ್ನು (ಎಟಿಎಫ್) ಉತ್ಪಾದಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 2.27 ಲಕ್ಷ ಟನ್ ಎಟಿಎಫ್ ಅನ್ನು ಉತ್ಪಾದಿಸಿತ್ತು.