LATEST NEWS
ನೆರೆ ಪೀಡಿತ ಪ್ರದೇಶಗಳಿಗೆ ಸಂಸದ ನಳಿನ್ ಕುಮಾರ್ ಭೇಟಿ

ನೆರೆ ಪೀಡಿತ ಪ್ರದೇಶಗಳಿಗೆ ಸಂಸದ ನಳಿನ್ ಕುಮಾರ್ ಭೇಟಿ
ಮುಲ್ಕಿ ಜುಲೈ 8: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಬಾರಿ ಮಳೆಗೆ ಜಿಲ್ಲೆಯ ಹಲವು ಕಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜಲಾವೃತವಾಗಿದೆ. ಈ ನಡುವೆ ಮುಲ್ಕಿ ಬಳಿಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನೀರು ನುಗ್ಗಿ ಸಂಪೂರ್ಣ ಜಲಾವೃತವಾಗಿತ್ತು.
ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಿನ್ನಲೆ ಸಂಸದ ನಳಿನ್ ಕುಮಾರ್ ತಮ್ಮ ರಾಂಚಿ ಪ್ರವಾಸ ವನ್ನು ಮೊಟಕುಗೊಳಿಸಿ ಜಿಲ್ಲೆಗೆ ವಾಪಾಸ್ಸಾಗಿದ್ದಾರೆ. ಇಂದು ಮಳೆ ಹಿನ್ನಲೆಯಲ್ಲಿ ಜಲಾವೃತವಾಗಿದ್ದ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇಂದು ಮಂಗಳೂರು ತಾಲೂಕಿನ ಮೂಲ್ಕಿ ಭಾಗದ ಮಳೆ ಪೀಡಿತ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಶಾಂಭವಿ ನದಿ ಉಕ್ಕಿ ಹರಿದಿದ್ದು ಹಲವೆಡೆ ತಗ್ಗುಪ್ರದೇಶಗಳಿಗೆ ನೆರೆ ನೀರು ನುಗ್ಗಿತ್ತು. ಬಪ್ಪನಾಡು ಕ್ಷೇತ್ರದ ಒಳಗೆ ನುಗ್ಗಿದ್ದ ನೀರು ಇಂದು ಬೆಳಗ್ಗೆಯೂ ಅಂಗಣದಲ್ಲಿ ಉಳಿದುಕೊಂಡಿತ್ತು. ಇದೇ ವೇಳೆ ಕಟೀಲು ದೇವಸ್ಥಾನ ಬಳಿ ಶಾಂಭವಿ ನದಿ ಧುಮ್ಮಿಕ್ಕಿ ಹರಿಯುತ್ತಿದೆ.
VIDEO