Connect with us

    DAKSHINA KANNADA

    ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಕಾರ್ಯದರ್ಶಿಯನ್ನು ಭೇಟಿಯಾದ ಕೋಟ- Thalassemia & Aplastic ಗಂಭೀರ ರಕ್ತದ ಖಾಯಿಲೆ ಚಿಕಿತ್ಸೆ ಬಗ್ಗೆ ಚರ್ಚೆ

    ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ (kota srinivas poojary ) ಇಂದು ದೆಹಲಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಅಪೂರ್ವ ಚಂದ್ರ ರವರನ್ನು ಭೇಟಿ ಮಾಡಿ Thalassemia & Aplastic ಗಂಭೀರ ರಕ್ತದ ಖಾಯಿಲೆ ಚಿಕಿತ್ಸೆ ಬಗ್ಗೆ ಚರ್ಚೆ ನಡೆಸಿದರು.

    ಉಡುಪಿಯ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ (KMC) ಮಕ್ಕಳ ವಿಭಿನ್ನ ಕಾಯಿಲೆಗಳ ಚಿಕಿತ್ಸೆಗೆ ಕೇಂದ್ರ ಸರಕಾರದ ಸಹಕಾರದ ಕುರಿತು ಚರ್ಚಿಸಿದರು.

    Thalassemia ಮತ್ತು Aplastic anaemia ಎಂಬ ರಕ್ತಕ್ಕೆ ಸಂಬಂಧಿಸಿದ ಖಾಯಿಲೆಗಳು ಮಕ್ಕಳ ಅರೋಗ್ಯದ‌ ಮೇಲೆ ಮಾತ್ರವಲ್ಲದೆ ಕುಟುಂಬದ ಆರ್ಥಿಕ ಪರಿಸ್ಥಿತಿಯ ಮೇಲೆಯೂ ಭೀಕರ ಹೊಡೆತ ನೀಡಿದೆ. ಈ ಖಾಯಿಲೆ ಬಂದರೆ ಸುಮಾರು ಹದಿನೈದು ಲಕ್ಷಕ್ಕೂ ಅಧಿಕ ಖರ್ಚು ತಗಲುವ ಸಂಭವವಿದೆ. ಕಸ್ತೂರ್ಬಾ ಮೆಡಿಕಲ್ ಕಾಲೇಜು ಮುಖಾಂತರ ಈಗಾಗಲೇ ಬಹಳಷ್ಟು ಮಕ್ಕಳಿಗೆ ಈ ಚಿಕಿತ್ಸೆ ನೀಡಲಾಗಿದೆ.

    ಈ ಖಾಯಿಲೆ ತಗಲುವ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಪ್ರತಿಷ್ಠಿತ “ಕೋಲ್ ಇಂಡಿಯಾ” ಸಂಸ್ಥೆಯು ಸುಮಾರು 10 ಲಕ್ಷದಿಂದ 15 ಲಕ್ಷ ರೂಪಾಯಿಯವರೆಗೆ ಪರಿಹಾರವನ್ನು ನೀಡುತ್ತದೆ. ಹೀಗಾಗಿ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಧ್ಯ ಪ್ರವೇಶಿಸಿ ಪ್ರಸ್ತುತ ಇರುವ ತಾಂತ್ರಿಕ ದೋಷವನ್ನು ಸರಿಪಡಿಸಿ ರೋಗಿಗಳಿಗೆ ನೆರವಾಗುವಂತೆ ಕೋರಲಾಯಿತು. ಈ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ಜೆಪಿ ನಡ್ಡಾ ರವರಿಗೆ ಇಲಾಖೆಯ ಕಾರ್ಯದರ್ಶಿಗಳ ಮೂಲಕ ಮನವಿ ಮಾಡಲಾಯಿತು.

    ಮನವಿಗೆ ಪೂರಕವಾಗಿ ಸ್ಪಂದಿಸಿದ ಅಧಿಕಾರಿಗಳು ಅತಿ ಶೀಘ್ರದಲ್ಲಿ ಈ ಸಮಸ್ಯೆಯನ್ನು ಪರಿಹರಿಸಿಕೊಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಹರ್ಶ ಮಂಗಳ ಇದರ ನಿರ್ದೇಶಕರಾದ ಶ್ರೀಮತಿ ಎಲ್.ಎಸ್.ಚಾಂಗ್‌ಸನ್ ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply