Connect with us

  LATEST NEWS

  ಮಂಗಳೂರು: ಅಕ್ರಮ ಸಂಬಂಧ ಉಳಿಸಲು ಸುಪಾರಿ ಕೊಟ್ಟು ಗಂಡನ ಕೊಲೆಗೈದ ಪತ್ನಿ ಸೇರಿ ಐವರಿಗೆ ಜೀವಾವಧಿ ಶಿಕ್ಷೆ..!

  ಮಂಗಳೂರು: ಅಕ್ರಮ ಸಂಬಂಧ ಉಳಿಸಲು ಸುಪಾರಿ ನೀಡಿ ಗಂಡನ ಹತ್ಯೆ ಮಾಡಿದ್ದ ಪತ್ನಿ ಸಹಿತ ಐವರಿಗೆ ಮಂಗಳೂರಿನ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ.

  ಉಳ್ಳಾಲ ದರ್ಗಾ ಸಮೀಪ, ಪ್ರಸ್ತುತ ಬಿ.ಸಿ.ರೋಡ್​ ನಿವಾಸಿ ಅಬ್ದುಲ್​ ಮುನಾಫ್ ಯಾನೆ ಮುನ್ನ(41), ಉಳ್ಳಾಲ್ ನಿವಾಸಿ ಅಬ್ದುಲ್ ರಹ್ಮಾನ್ (36), ಬೋಳಿಯಾರು ನಿವಾಸಿ ಶಬೀರ್ ಯಾನೆ ಶಬ್ಬಿ(31), ಕುತ್ತಾರ್‌ಪದವು ನಿವಾಸಿ ಜಮಾಲ್ ಅಹಮದ್ (38), ಪಾವೂರು ನೆಬಿಸಾ(40) ಶಿಕ್ಷೆಗೊಳಗಾದ ಅಪರಾಧಿಗಳಾಗಿದ್ದಾರೆ. 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ಐವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯ ತೀರ್ಪು ನೀಡಿದೆ. ಉಳ್ಳಾಲ ಪಾವೂರು ಇನೋಳಿ ದೆಂಡಿಂಜೆ ನಿವಾಸಿ ಇಸ್ಮಾಯಿಲ್ (59) ಕೊಲೆಯಾದ ವ್ಯಕ್ತಿಯಾಗಿದ್ದಾರೆ.
  ಪಾವೂರು ನಿವಾಸಿ ಇಸ್ಮಾಯಿಲ್​ ಎಂಬವರಿಗೆ ನೆಬಿಸಾ ಜೊತೆ ಎರಡನೇ ಮದುವೆಯಾಗಿದ್ದು, ನಾಲ್ವರು ಮಕ್ಕಳಿದ್ದರು, ಇಸ್ಮಾಯಿಲ್ ಬಾಡಿಗೆ ವಾಹನಗಳನ್ನು ಓಡಿಸುತ್ತಿದ್ದ ಆದರೆ ಗೃಹಿಣಿಯಾಗಿದ್ದ ನೆಬಿಸಾಗೆ ಬೇರೊಂದು ಅಕ್ರಮ ಸಂಬಂಧವಿದ್ದು, ಇದೇ ವಿಚಾರದಲ್ಲಿ ಇಸ್ಮಾಯಿಲ್ ಮತ್ತು ನೆಬಿಸಾ ಮಧ್ಯೆ ಜಗಳವಾಗುತ್ತಿತ್ತು. ಹೀಗಾಗಿ ನೆಬಿಸಾ ಅಪರಾಧಿ ಜಮಾಲ್ ಜೊತೆ ಸೇರಿ ಗಂಡ ಇಸ್ಮಾಯಿಲ್‌ನನ್ನು ಕೊಲೆ ಮಾಡಲು ನಿರ್ಧರಿಸಿದ್ದಳು. ಗಂಡನ ಕೊಲೆ ಮಾಡಿದರೆ 2.50 ಲಕ್ಷ ರೂ. ಸುಪಾರಿ ನೀಡುವುದಾಗಿ ವಾಗ್ದಾನ ಮಾಡಿದ್ದಳು.ಸುಪಾರಿಗಾಗಿ ಅಪರಾಧಿಗಳು ನೆಬಿಸಾ ಪತಿ ಇಸ್ಮಾಯಿಲ್‌ನ​ನ್ನು 2016ರ ಫೆ.16ರಂದು ಬಾಡಿಗೆ ನೆಪದಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿ, ಮದ್ಯಪಾನ ಮಾಡಿಸಿ ಶಿರಾಡಿಯತ್ತ ತೆರಳಿದ್ದಾರೆ. ಶಿರಾಡಿ ರಕ್ಷಿತಾರಣ್ಯದ ಕೆಂಪುಹೊಳೆ ಸಮೀಪ ತಲುಪಿದಾಗ ವಾಹನ ಕೆಟ್ಟುಹೋಗುತ್ತದೆ. ಈ ಸಂದರ್ಭದಲ್ಲಿ ವಾಹನದಿಂದ ಇಳಿದ ಆರೋಪಿಗಳು ಇಸ್ಮಾಯಿಲ್‌ನ​ನ್ನು ರಕ್ಷಿತಾರಣ್ಯದೊಳಗೆ ಕರೆದೊಯ್ದು ಚೂರಿಯಿಂದ ಇರಿದು ಕೊಲೆ ಮಾಡಿ, ಬಟ್ಟೆಯನ್ನು ತೆಗೆದು ಕಾಡಿನ ತಗ್ಗು ಪ್ರದೇಶದಲ್ಲಿಟ್ಟು, ತರಗೆಲೆಗಳನ್ನು ಮುಚ್ಚಿ ಹಾಕುತ್ತಾರೆ. ಬಳಿಕ ವಾಹನವನ್ನು ರಿಪೇರಿ ಮಾಡಿ ಉಪ್ಪಿನಂಗಡಿಯಲ್ಲಿ ನಿಲ್ಲಿಸಿ, ಇಸ್ಮಾಯಿಲ್​ನ ರಕ್ತದ ಕಲೆಯಿರುವ ಬಟ್ಟೆ, ಮೊಬೈಲ್‌ಗಳನ್ನು ಉಳ್ಳಾಲ ನೇತ್ರಾವತಿ ನದಿಗೆ ಎಸೆಯುತ್ತಾರೆ. ಇದಾದ ನಂತರ ನೆಬಿಸಾ ಆರೋಪಿಗಳಿಗೆ 2.50 ಲಕ್ಷ ರೂ.ನೀಡಲು ಚಿನ್ನಾಭರಣಗಳನ್ನು ಅಡವಿಟ್ಟಿರುವುದು ತನಿಖೆ ವೇಳೆ ಬಹಿರಂಗವಾಗಿದೆ. ಹಾಗೆಯೇ ನೆಬಿಸಾ ತನ್ನ ಮೇಲೆ ಅನುಮಾನ ಬಾರದಿರಲೆಂದು 2016ರ ಫೆ.17ರಂದು ಗಂಡ ನಾಪತ್ತೆಯಾಗಿರುವ ಬಗ್ಗೆ ಉಳ್ಳಾಲ ಪೊಲೀಸರಿಗೆ ದೂರು ನೀಡುತ್ತಾಳೆ. ಈ ಮಧ್ಯೆ ಇಸ್ಮಾಯಿಲ್​ನ 1ನೇ ಹೆಂಡತಿಯ ಮಗನಿಗೆ ಉಪ್ಪಿನಗಂಡಿಯಲ್ಲಿ ಬಿಟ್ಟು ಬಂದ ವಾಹನದಲ್ಲಿ ರಕ್ತದ ಕಲೆಗಳು ಕಂಡಿವೆ. ತಕ್ಷಣ ಚಿಕ್ಕಮ್ಮ ನೆಬಿಸಾ ವಿರುದ್ಧ ಅನುಮಾನದಿಂದ ಫೆ.18ರಂದು ಪೊಲೀಸರಿಗೆ ದೂರು ನೀಡುತ್ತಾನೆ, ಪೊಲೀಸರಿಂದ ತನಿಖೆ ನಡೆದಾಗ ಸತ್ಯಾಂಶ ನೆಬಿಸಾಳ ಕರಾಳ ಕೃತ್ಯ ಬಯಲಾಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply