KARNATAKA
ಮಹಾಕುಂಭಮೇಳದಿಂದ ಹಿಂದಿರುಗುತ್ತಿದ್ದಾಗ ಭೀಕರ ರಸ್ತೆ ಅಪಘಾತ – ಕರ್ನಾಟಕದ ನಾಲ್ವರು ಸೇರಿ ಆರು ಮಂದಿ ಸಾವು
![](https://i0.wp.com/themangaloremirror.in/wp-content/uploads/2024/04/For-Advertisement-Please-Contact-1.jpg?fit=728%2C90&ssl=1)
ಇಂದೋರ್ ಫೆಬ್ರವರಿ 07: ಮಾನ್ಪುರದ ಭೇರುಘಾಟ್ ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇದುವರೆಗೆ 6 ಜನರು ಪ್ರಾಣ ಕಳೆದುಕೊಂಡಿದ್ದಾರೆ. ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.
ಮಧ್ಯರಾತ್ರಿ ಟೆಂಪೋ ಟ್ರಾವೆಲರ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಒಂದು ಬೈಕ್ ಕೂಡ ಭಾಗಿಯಾಗಿದೆ. ಅಪಘಾತದಲ್ಲಿ 17 ಜನರು ಗಾಯಗೊಂಡಿದ್ದು, ಅವರನ್ನು ಇಂದೋರ್‌ನ ಎಂವೈ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರಾವೆಲರ್‌ನಲ್ಲಿದ್ದ ಪ್ರಯಾಣಿಕರು ಉಜ್ಜಯಿನಿಯ ಮಹಾಕಾಲಕ್ಕೆ ಭೇಟಿ ನೀಡಿದ ನಂತರ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದರು.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಪೊಲೀಸರ ಪ್ರಕಾರ, ಶುಕ್ರವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಈ ಅಪಘಾತ ಮಾನ್ಪುರ ಪ್ರದೇಶದ ಭೇರುಘಾಟ್‌ನಲ್ಲಿರುವ ದೇವಾಲಯದ ಬಳಿ ಸಂಭವಿಸಿದೆ. ತಡರಾತ್ರಿಯಲ್ಲಿ, ಟ್ರಾವೆಲರ್ ಗೆ ಬೈಕ್ ಒಂದು ಡಿಕ್ಕಿ ಹೊಡೆದಿದೆ. ಈ ವೇಳೆ ನಿಯಂತ್ರಣ ತಪ್ಪಿದ ಟ್ರಾವೆಲ್ಲರ್ ನಿಂತಿದ್ದ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ.