DAKSHINA KANNADA
ಅದ್ಯಾರೋ ಪುನಿತ್ ಕೆರೆಹಾವು ಅಂತೆ..ಅದ್ಯಾರೋ ಚೈನ್ ಚೈತ್ರಾ ಅಂತೆ ಇವರೆಲ್ಲಾ ಹಿಂದುತ್ವದ ರಾಯಬಾರಿಗಳು – ಕಾಂಗ್ರೇಸ್ ಮುಖಂಡ ಎಂಜಿ ಹೆಗ್ಗಡೆ

ಪುತ್ತೂರು ಫೆಬ್ರವರಿ 07: ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿನ ಮನೆ ತೆರವು ಪ್ರಕರಣದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಬಿಜೆಪಿಯಿಂದ ಅವಹೇಳನ ಅರೋಪ ಮಾಡಿರುವುದರ ವಿರುದ್ದ ಪುತ್ತೂರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪುತ್ತೂರಿನ ಅಮರ್ ಜವಾನ್ ಜ್ಯೋತಿ ಬಳಿ ಪ್ರತಿಭಟನೆ ನಡೆಸಿದ ಕಾಂಗ್ರೇಸ್ ಕಾಂಗ್ರೇಸ್ ಕಾರ್ಯಕರ್ತರು ಬಿಜೆಪಿ ವಿರುದ್ದ ಘೋಷಣೆಗಳ್ನು ಕೂಗಿದರು. ಈ ವೇಳೆ ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಕಾಂಗ್ರೇಸ್ ಮುಖಂಡ ಎಂ.ಜಿ.ಹೆಗಡೆ, ಬಿಜೆಪಿ ಮತ್ತು ಸಂಘ ಪರಿವಾರದವರು ನಕಲಿ ಹಿಂದುತ್ವವಾದಿಗಳು, ಇವರನ್ನು ಹೀಗೆ ಮುಂದುವರಿಯಲು ಬಿಟ್ಟರೆ ಹಿಂದೂ ಧರ್ಮಕ್ಕೇ ಆತಂಕ. ಹಿಂದೂ ಧರ್ಮದ ಉಪನಿಷತ್ತ್, ವೇದಗಳನ್ನು ಈ ನಕಲಿ ಹಿಂದೂಗಳು ನಾಶ ಮಾಡಲಿದ್ದಾರೆ. ಇವರಿಗೆ ಚುನಾವಣೆ ಬಂದಾಗ ಮಾತ್ರ ಹಿಂದುತ್ವ ನೆನಪಾಗೋದು, ಬಿಜೆಪಿ ಕಾಂಗ್ರೇಸ್ ಪಕ್ಷದ ಗೂಂಡಾಗಿರಿ ಬಗ್ಗೆ ಮಾತಾಡುತ್ತೆ. ಚುನಾವಣೆ ಬಂದಾಗ ಬಿಜೆಪಿ ಎಷ್ಟು ಅಮಾಯಕರನ್ನು ಕೊಂದು ಹಾಕಿದೆ. ಈ ಕುರಿತ ಲೆಕ್ಕ ಬಿಜೆಪಿ ಬಳಿ ಇದೆಯಾ? ಎಂದು ಪ್ರಶ್ನಿಸಿದರು.

ಮಹಾಲಿಂಗೇಶ್ವರ ದೇವಸ್ಥಾನದ ಜಾಗವನ್ನು ಕಾಂಗ್ರೇಸ್ ಪಕ್ಷದ ಯಾರಾದರೂ ಅತಿಕ್ರಮಣ ಮಾಡುತ್ತಿದ್ದಲ್ಲಿ ಪುತ್ತೂರಿನಲ್ಲಿ ಗಲಭೆ ಮಾಡುತ್ತಿದ್ದರು. ಇದೇ ಬಿಜೆಪಿಯವರು ಕಾಂಗ್ರೆಸ್ ವಿರುದ್ಧ ಮೊದಲು ಪ್ರತಿಭಟನೆ ಮಾಡಿ ಯಾರೊಬ್ಬ ಪಾಪದವನಿಗೆ ಚೂರಿ ಇರಿದು , ಬಳಿಕ ಗಲಾಟೆ ಮಾಡಿ ಕರ್ಫ್ಯೂ ಆಗುವ ತನಕ ಮುಂದುವರಿಯುತ್ತಿದ್ದರು, ಆದರೆ ಈ ಪ್ರಕರಣದಲ್ಲಿ ಹಿಂದೂ ಮುಖಂಡನೇ ದೇವಸ್ಥಾನದ ಜಾಗ ಅತಿಕ್ರಮಿಸಿಕೊಂಡಿದ್ದಾನೆ, ಆ ಕಾರಣಕ್ಕೆ ಯಾವುದೇ ಪ್ರತಿಭಟನೆ ಇಲ್ಲ, ಇದು ಬಿಜೆಪಿಯ ನಕಲಿ ಹಿಂದುತ್ವ ಎಂದು ಕಾಂಗ್ರೆಸ್ ಮುಖಂಡ ಎಂ.ಜಿ.ಹೆಗಡೆ ವಾಗ್ದಾಳಿ ನಡೆಸಿದ್ದಾರೆ.
1 Comment