LATEST NEWS
ತಂತ್ರಜ್ಞಾನ ಬೆಳವಣಿಗೆ ಆಗ್ತಾ ಇದ್ದ ಹಾಗೆ ಚುನಾವಣಾ ದಿನ ಕಡಿಮೆ ಆಗ್ಬೇಕಿತ್ತು…ಆದರೆ ಈ ಬಾರಿ 60 ದಿನಕ್ಕೂ ಅಧಿಕ ಇದೆ – ವೀರಪ್ಪ ಮೊಯಿಲಿ
ಮಂಗಳೂರು ಎಪ್ರಿಲ್ 21: ಹಿಂದೆ ಲೋಕಸಭೆ ಚುನಾವಣೆ ನಡೆದ ವೇಳೆ ಕೇವಲ 20 ದಿನಗಳಲ್ಲಿ ಮುಗಿತಿತ್ತು, ಆದರೆ ಇದೀಗ 60ಕ್ಕೂ ಅಧಿಕ ದಿನ ಚುನಾವಣೆ ನಡೆಯುತ್ತಿದೆ ಇದರ ಹಿಂದಿರುವ ವಿಚಾರ ಏನು ಎಂಬುದನ್ನು ಚುನಾವಣಾ ಆಯೋಗ, ಪ್ರಧಾನಿ ಸ್ಪಷ್ಟ ಪಡಿಸಲಿ ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಲೋಕಸಭೆ ಚುನಾವಣೆ ದೇಶದ ಪ್ರಮುಖ ಚುನಾವಣೆ ಆಗಿದೆ. ಈ ಹಿಂದೆ ಚುನಾವಣೆ ಒಂದು ತಿಂಗಳ ಒಳಗೆ ೨೦ ದಿನಗಳಲ್ಲಿ ಮುಗಿತ ಇತ್ತು. ಆದ್ರೆ ಈ ಬಾರಿ ಚುನಾವಣೆ ೬೦ ದಿನಗಳೊಗೂ ಅಧಿಕವಾಗಿದೆ. ಇದ್ರ ಹಿಂದಿರುವ ವಿಚಾರ ಏನು ಎಂಬುದನ್ನು ಚುನಾವಣಾ ಆಯೋಗ, ಪ್ರಧಾನಿ ಸ್ಪಷ್ಟ ಪಡಿಸಲಿ ಎಂದರು. ಆಧುನಿಕತೆ ತಂತ್ರಜ್ಞಾನ ಬೆಳವಣಿಗೆ ಆಗ್ತಿದ್ದಂತೆ ಚುನಾವಣಾ ಕಾಲ ಕಮ್ಮಿ ಆಗಬೇಕಿತ್ತು, ಆದರೆ
ಆದ್ರೆ ಇಲ್ಲಿ ಮೂರು ತಿಂಗಳ ಕಾಲಾವಕಾಶ ಏಕೆ ಪಡೆದಿದ್ದಾರೆ. ಒಂದು ದೇಶ ಒಂದು ಚುನಾವಣೆ ಹೇಳ್ತಾರೆ. ಅದು ಆದ್ರೆ ಈ ದೇಶದಲ್ಲಿ ಚುನಾವಣೆ ಆಗಲು ಒಂದು ವರ್ಷ ಬೇಕಾದಿತು, ಇವ್ರು ತಿಳಿದಿದ್ದಾರೆ ಒಂದು ದೇಶ ಒಂದು ಚುನಾವಣೆಯಲ್ಲಿ ಮತದಾರರು ಪಂಚಾಯತ್ ನಿಂದ ಕೇಂದ್ರದ ವರೆಗೆ ಬಿಜೆಪಿಯನ್ನು ಆಯ್ಕೆ ಮಾಡ್ತಾರೆ ಎಂದು ಕನಸು ಕಾಣ್ತಾ ಇದ್ದಾರೆ. ಆದರೆ ಈ ಬಾರಿ ಜನ ತೋರಿಸಲಿದ್ದಾರೆ ಎಂದರು. ಬಿಜೆಪಿಯವರು 400ಕ್ಕೂ ಅಧಿಕ ಸೀಟ್ ಪಡೆಯಲಿದ್ದಾರೆ ಎಂದು ಹೇಳುತ್ತಿದ್ದು ಆದರೆ ಅವರು 150 ಸೀಟ್ ಅಷ್ಟೇ ಪಡೆಯಲಿದ್ದಾರೆ ಎಂದು ಭವಿಷ್ಯ ನುಡಿದರು.