LATEST NEWS
ಧಾರಾಕಾರ ಮಳೆಯಲ್ಲಿ ನವಜಾತ ಶಿಶುವನ್ನು ಕಸದ ಬುಟ್ಟಿಗೆ ಎಸೆದ ಪಾಪಿ ತಾಯಿ
ಉಡುಪಿ ಅಗಸ್ಟ್ 10 : ಇಂದು ಹುಟ್ಟಿರುವ ನವಜಾತ ಶಿಶುವನ್ನು ಕಸದ ತೊಟ್ಟಿಗೆ ಪಾಪಿ ತಾಯಿಯೊಬ್ಬಳು ಎಸೆದು ಹೋಗಿರುವ ಘಟನೆ ಉಡುಪಿಯ ಚಿತ್ತರಂಜನ್ ಸರ್ಕಲ್ ಬಳಿ ನಡೆದಿದೆ.
ಜಿಲ್ಲೆಯಲ್ಲಿ ಒಂದೆಡೆ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಪಾಪಿ ತಾಯಿಯೊಬ್ಬಳು ಮಾಡಿರುವ ಕಾರ್ಯ ನಾಗರೀಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಹೆಣ್ಣು ಮಗುವೆಂದು ತಿಳಿದು ನವಜಾತ ಶಿಶುವನ್ನು ಉಡುಪಿಯ ಚಿತ್ತರಂಜನ್ ಸರ್ಕಲ್ ಬಳಿಯ ಕಸದ ಬುಟ್ಟಿಗೆ ಎಸೆದು ಹೋಗಿದ್ದಾಳೆ ಮಗುವಿನ ತಾಯಿ.
ಮಗುವಿನ ಅಳುವನ್ನು ಗಮನಿಸಿದ ನಗರಸಭೆ ಪೌರ ಕಾರ್ಮಿಕ, ಬುಟ್ಟಿಯನ್ನ ಗಮನಿಸಿದಾಗ ನವಜಾತ ಶಿಶು ಪತ್ತೆಯಾಗಿದೆ. ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಮಗುವನ್ನು ಕೂಡಲೇ ಆಸ್ಪತ್ರೆಗೆ ಉಡುಪಿ ಸರಕಾರಿ ಮಹಿಳಾ ಹೆರಿಗೆ ಆಸ್ಪತ್ರೆ ಗೆ ದಾಖಲಿಸಿದ್ದಾರೆ. ಕರುಳ ಬಳ್ಳಿಯನ್ನು ಕತ್ತರಿಸಿ ವೈದ್ಯರು ಮಗುವಿನ ಆರೈಕೆ ಮಾಡಿದ್ದು, ಈಗ ಮಗು ಆಸ್ಪತ್ರೆಯಲ್ಲಿ ಆರೋಗ್ಯವಾಗಿದೆ. ಘಟನೆ ಕುರಿತಂತೆ ಉಡುಪಿ ನಗರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.