Connect with us

LATEST NEWS

Subscribe ಪದದಿಂದ ರಾತ್ರೋರಾತ್ರಿ ಇಂಟರ್ ನೆಟ್ ಸ್ಟಾರ್ ಆದ ಬಾಲಕ

ಮಂಗಳೂರು, ಆಗಸ್ಟ್ 10: ಇಂಟರ್ ನೆಟ್ ಯಾರನ್ನು ಬೇಕಾದರೂ ರಾತ್ರಿ ಬೆಳಗಾಗದೊರಳಗೆ ಸ್ಟಾರ್ ಮಾಡಿ ಬಿಡುತ್ತೆ. ಸೊಶಿಯಲ್ ಮೀಡಿಯಾಗಳಲ್ಲಿ ಕೇವಲ ಒಂದು ಸಣ್ಣ ವಿಡಿಯೋ ದಿಂದ ಸ್ಟಾರ್ ಆದವರು ನಮ್ಮ ಕಣ್ಣಮುಂದೆ ಇದ್ದಾರೆ. ಅದೇ ರೀತಿ ಮಂಗಳೂರಿನ ಬಾಲಕ ತಪ್ಪಾಗಿ ಉಚ್ಚರಿಸಿದ ಪದ ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ.


ವಿಡಿಯೋ ‘Subscribe’ ಮಾಡಿ ಅಂತಾ ಹೇಳಲು ಪರದಾಡಿದ್ದೇ ಈ ಹುಡುಗನನ್ನು ಈಗ ಜಗತ್ತಿನ ಗಮನ ಸೆಳೆಯುವಂತೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಈ ಹುಡುಗನ ವಿಡಿಯೋ ಸೆಲೆಬ್ರಿಟಿಗಳ ಗಮನಸೆಳೆದಿದೆ.


ನಾನೊಂದು ಹೊಸ ವಿಡಿಯೋ ಮಾಡಿದ್ದು, ಅದಕ್ಕೆ ಒಂದು ಮಿಲಿಯನ್ ಲೈಕ್ ಬರಬೇಕು. ಆದ್ದರಿಂದ ಎಲ್ಲರೂ ಸಬ್ಸ್​​ಕ್ರೈಬ್ ಆಗಿ ಎನ್ನಲು ಹೋಗಿ ಪರದಾಡಿ ‘ಸರಪ ಕರೈಬ್’ ಎಂದು ಹೇಳಿ ಕುಡ್ಲದ ಪೋರನೋರ್ವ ರಾತ್ರೋರಾತ್ರಿ ಪ್ರಸಿದ್ಧಿಯಾಗಿದ್ದಾನೆ.


ಮಂಗಳೂರು ಹೊರವಲಯದ ತೊಕ್ಕೊಟ್ಟಿನ ಬಬ್ಬುಕಟ್ಟೆ ಹೀರಾ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿಯಾಗಿರುವ ಅಬ್ದುರ್ರಹ್ಮಾನ್ ಹೀಗೆ ಗಮನ ಸೆಳೆದ ಹುಡುಗ. ಈತ ಯೂಟ್ಯೂಬ್ ಚಾನೆಲ್​ಗೆ ಹೊಸ ವಿಡಿಯೋ ಅಪ್ಲೋಡ್ ಮಾಡಿ ಒಂದು ಮಿಲಿಯನ್ ಲೈಕ್ ಬರಬೇಕು. ಎಲ್ಲರೂ ಯೂಟ್ಯೂಬ್ ಚ್ಯಾನೆಲ್​​ಗೆ ಸಬ್ಸ್​​ಕ್ರೈಬ್ ಆಗಿ ಎಂದು ಪ್ರಚಾರ ಮಾಡಲು ಹೋಗಿದ್ದ ಆದರೆ ಇತನ ಸಬ್ ಸ್ಕ್ರೈಬ್ ಪದ ಹೋಗಿ ಸಬಕರ….ಸಬಕರರರಾ ಎಂದು ಹೇಳಿದ್ದಾನೆ. ಮುದ್ದು ಮುದ್ದಾಗಿರುವ ಈ ಹುಡುಗ ಸಬಕರ.. ಸಬಕರರಾ ಎನ್ನುತ್ತಾ ಈ ವಿಡಿಯೋ ಒಂದು ಲಕ್ಷ ಲೈಕ್ಸ್ ಪಡೀಬೇಕು ಎಂದಿದ್ದನ್ನು ನೋಡಿದ ಸಂಬಂಧಿಕರೊಬ್ಬರು ವಿಡಿಯೋವನ್ನು ಫೇಸ್ ಬುಕ್ಕಿಗೆ ಅಪ್ಲೋಡ್ ಮಾಡಿದ್ದಾರೆ. ಹುಡುಗ ತೊಳಲಾಡುವುದೇ ನೋಡುಗರ ಗಮನ ಸೆಳೆದಿದ್ದು ಆಕರ್ಷಣೆಗೆ ಕಾರಣವಾಗಿದೆ. ‘Subscribe’ ಮಾಡುವಂತೆ ಹೇಳಲು ಬಾಲಕ ಪರದಾಡಿದ್ದೇ ಈಗ ಟ್ರೆಂಡ್ ಆಗಿದೆ


ಇದಿಷ್ಟೇ ಅಲ್ಲದೆ ಈ ಪೋರ ಸಬ್ಸ್​​ಕ್ರೈಬ್ ಆಗಿ ಎನ್ನಲು ಪರದಾಡಿರುವ ವಿಡಿಯೋ ಸೆಲೆಬ್ರಿಟಿಗಳ ಗಮನವನ್ನು ಸೆಳೆದಿದ್ದು, ಬಹುಭಾಷಾ ಹಿನ್ನೆಲೆ ಗಾಯಕ ಅರ್ಮಾನ್ ಮಲಿಕ್​ ಕೂಡ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ‌. ಕಾಮಿಡಿಯನ್ ಆಶಿಶ್ ಚಂಚ್ಲಾನಿ ಕೂಡ ತಮ್ಮ ಇನ್ಸ್​​ಟಾಗ್ರಾಮ್​​ನಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಿದ್ದು 40 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ.

Facebook Comments

comments