KARNATAKA
ಪುಟ್ಟ ಕಂದಮ್ಮಳನ್ನು ನೇಣಿಗೆ ಹಾಕಿ ತಾಯಿ ಆತ್ಮಹತ್ಯೆ..!
ಕಲಬುರಗಿ: ಎರಡು ವರ್ಷದ ಹೆಣ್ಣು ಮಗುವನ್ನು ನೇಣಿಗೆ ಹಾಕಿ, ನಂತರ ಮಹಿಳೆ ತಾನೂ ನೇಣಿಗೆ ಶರಣಾದ ದಾರುಣ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಮರಪಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಯಿ ಶಿವಲೀಲಾ (24) ಹಾಗೂ ಮಗಳು ವರ್ಷಿತಾ(2) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ಸಂದರ್ಭ ತಾಯಿ ಮೊದಲು ಮಗುವಿಗೆ ನೇಣು ಹಾಕಿ ಬಳಿಕ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತ ತಾಯಿ, ಮಗುವಿನ ಮೃತದೇಹ ಚಿಂಚೋಳಿ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಚಿಂಚೋಳಿ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗಂಡ ಆನಂದ ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.