LATEST NEWS
ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ನನ್ನು ಗುಂಡಿಕ್ಕಿ ಕೊಂದ ಅಪರಿಚಿತರು…!!

ಇಸ್ಲಾಮಾಬಾದ್ ನವೆಂಬರ್ 10: ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ನ್ನು ಅಪರಿಚಿತರು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ನಡೆದಿದೆ. ಒಂದು ವಾರದ ಅವಧಿಯಲ್ಲಿ ಇಬ್ಬರು ಟೆರರಿಸ್ಟ್ ಗಳನ್ನು ಇದೇ ರೀತಿ ಕೊಲೆ ಮಾಡಲಾಗಿದೆ. ಕೊಲೆಯಾದ ಉಗ್ರ ಲಷ್ಕರ್-ಎ-ತೊಯ್ಬಾ ಕಮಾಂಡರ್ ಅಕ್ರಮ್ ಘಾಜಿ ಎಂದು ಗುರುತಿಸಲಾಗಿದೆ.
ಬಜೌರ್ ಜಿಲ್ಲೆಯಲ್ಲಿ ಬೈಕ್‌ನಲ್ಲಿ ಬಂದ ಪಾಕಿಸ್ತಾನದ ಅಪರಿಚಿತ ವ್ಯಕ್ತಿಗಳು ಆತನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಕ್ರಮ್ ಖಾನ್ ಅಲಿಯಾಸ್ ಘಾಜಿ 2018-2020 ರ ಅವಧಿಯಲ್ಲಿ ಲಷ್ಕರ್‌ಗೆ ಉನ್ನತ ನೇಮಕಾತಿದಾರರಲ್ಲಿ ಒಬ್ಬನಾಗಿದ್ದ. ಕಳೆದ ಎರಡು ವರ್ಷಗಳಲ್ಲಿ ಕಾಶ್ಮೀರ ಕಣಿವೆಗೆ ಅನೇಕ ಬ್ಯಾಚ್‌ಗಳಲ್ಲಿ ನುಸುಳಿದ ಹಲವಾರು ಭಯೋತ್ಪಾದಕರ ಜವಾಬ್ದಾರಿಯನ್ನು ಹೊತ್ತಿದ್ದ.

ಜಮ್ಮು ಮತ್ತು ಕಾಶ್ಮೀರದಲ್ಲಿ 2018 ರ ಸುಂಜ್ವಾನ್ ಭಯೋತ್ಪಾದನಾ ದಾಳಿಯ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬನಾಗಿದ್ದ ಖ್ವಾಜಾ ಶಾಹಿದ್‌ನನ್ನು ಭಾನುವಾರ ಅಪಹರಿಸಲಾಗಿತ್ತು. ಪಾಕ್ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿ ಶಿರಚ್ಛೇದನ ಮಾಡಲಾಯಿತು. ಘಾಜಿ ಹತ್ಯೆಯಲ್ಲಿ ವಿವಿಧ ಭಯೋತ್ಪಾದಕ ಗುಂಪುಗಳು ಸೇರಿದಂತೆ ಸ್ಥಳೀಯ ವಿರೋಧಿಗಳ ಪಾತ್ರ ಇರಬಹುದು ಎನ್ನಲಾಗಿದೆ. ಘಾಜಿ ಲಷ್ಕರ್‌ನ ಕೇಂದ್ರ ನೇಮಕಾತಿ ಸೆಲ್‌ನ ಪ್ರಮುಖ ಸದಸ್ಯನಾಗಿದ್ದ. ಭಾರತದ ವಿರುದ್ಧ ದ್ವೇಷ ತುಂಬಿದ ಭಾಷಣಗಳಿಗೆ ಹೆಸರುವಾಸಿಯಾಗಿದ್ದ.