LATEST NEWS
ಶಬರಿಮಲೆ ಮಹಿಳೆಯರ ಪ್ರವೇಶ ಹಿನ್ನಲೆ 100 ಕೋಟಿ ಆದಾಯ ಖೋತಾ
ಶಬರಿಮಲೆ ಮಹಿಳೆಯರ ಪ್ರವೇಶ ಹಿನ್ನಲೆ 100 ಕೋಟಿ ಆದಾಯ ಖೋತಾ
ಕೇರಳ ಜನವರಿ 23: ಎಲ್ಲಾ ವಯೋಮಾನದ ಮಹಿಳೆಯರು ಶಬರಿಮಲೆ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅವಕಾಶ ಕಲ್ಪಿಸಿದ ನಂತರ ಉಂಟಾದ ಸಮಸ್ಯೆಯಿಂದಾಗಿ ದೇವಸ್ಥಾನದ ಆದಾಯದ ಮೇಲೆ ಭಾರಿ ಪ್ರಹಾರ ನೀಡಿದೆ.
ಸುಪ್ರೀಂಕೋರ್ಟ್ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ನಂತರ ನಡೆದ ಪ್ರತಿಭಟನೆ ಹಿನ್ನಲೆಯಲ್ಲಿ ಶಬರಿಮಲೆಗೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಅಲ್ಲದೆ ದೇವಸ್ಥಾನದ ಹುಂಡಿಗೆ ಹಣ ಹಾಕಬಾರದು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಕೂಡ ಆರಂಭವಾಗಿತ್ತು. ಇದೆಲ್ಲರದ ಪರಿಣಾಮ ದೇವಸ್ಥಾನದ ಆದಾಯದ ಮೇಲೆ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ತಿರುವಾಂಕೂರು ದೇವಸ್ವಂ ಮಂಡಳಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ.
ಶಬರಿಮಲೆಯಲ್ಲಿ ಮಂಡಲ, ಮಕರ ಸಂಕ್ರಮಣ ಉತ್ಸವ ಅವಧಿಯಲ್ಲಿ ಸುಮಾರು 100 ಕೋಟಿ ರೂಪಾಯಿ ಆದಾಯ ಕಡಿಮೆ ಬಂದಿದೆ ಎಂದು ಹೇಳಲಾಗಿದೆ. ಆದಾಯದಲ್ಲಿ 98 ಕೋಟಿ ರೂ. ಹಾಗೂ ದೇವಾಲಯದ ಆಸುಪಾಸಿನ ಅಂಗಡಿಗಳ ಹರಾಜು ಪ್ರಕ್ರಿಯೆ ಮೂಲಕ 100 ಕೋಟಿಗೂ ಹೆಚ್ಚಿನ ಕೊರತೆ ಆಗಿದೆ.
ದೇವಸ್ವಂ ಬೋರ್ಡ್ ಅಧೀನದಲ್ಲಿರುವ ದೇವಾಲಯಗಳ ದೈನಂದಿನ ಪ್ರಕ್ರಿಯೆಗೆ ಶಬರಿಮಲೆ ಆದಾಯ ಕಡಿಮೆಯಾಗಿರುವುದು ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ. ದೇವಸ್ವಂ ಮಂಡಳಿ ನೌಕರರ ವೇತನ, ಪಿಂಚಣಿ ವಿತರಣೆಗೂ ಇದು ಸಮಸ್ಯೆ ತರಲಿದೆ.
ಶಬರಿಮಲೆಗೆ ಯುವತಿಯರ ಪ್ರವೇಶ ವಿಷಯದಲ್ಲಿ ತಲೆದೋರಿದ್ದ ಸಮಸ್ಯೆ ದೇವಸ್ಥಾನದ ಆದಾಯದ ಮೇಲೆ ಪ್ರಹಾರ ನೀಡಿದೆ.
ಶಬರಿಮಲೆಯಲ್ಲಿ ಆದಾಯದ ಕೊರತೆಯಿಂದ ಮಂಡಳಿ ಸರ್ಕಾರವನ್ನು ಇದಿರುನೋಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ದೇವಸ್ವಂ ಮಂಡಳಿ ಅಧ್ಯಕ್ಷ ಎ.ಪದ್ಮಕುಮಾರ್ ತಿಳಿಸಿದ್ದಾರೆ. ಮುಂದಿನ ಬಜೆಟ್‌ನಲ್ಲಿ ಹಣ ನೀಡುವ ಮೂಲಕ ದೇವಸ್ವಂ ಮಂಡಳಿಯ ಸಮಸ್ಯೆ ಪರಿಹರಿಸಲು ಸಾಧ್ಯವಾಗಲಿದೆ ಎಂದೂ ಅವರು ತಿಳಿಸಿದ್ದಾರೆ.