LATEST NEWS
ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ – ಅನ್ಯಕೋಮಿನ ಜೋಡಿ ಮೇಲೆ ಹಲ್ಲೆಗೆ ಯತ್ನ…!!

ಮಂಗಳೂರು ಡಿಸೆಂಬರ್ 23: ಹಿಂದೂ ಯುವತಿಯ ಜೊತೆ ಮುಸ್ಲಿಂ ಯುವಕ ನಿಂತಿದ್ದಕ್ಕೆ ಹಿಂದೂ ಸಂಘಟನೆಯ ಕಾರ್ಯಕರ್ತರು ಯುವಕನ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಮಂಗಳೂರಿನ ಹಂಪನಕಟ್ಟೆಯ ಮಿಲಾಗ್ರಿಸ್ ಬಳಿ ನಡೆದಿದೆ.
ನಗರದ ಹಂಪನಕಟ್ಟೆ ಸಮೀಪದ ಮಿಲಾಗ್ರಿಸ್ ಬಳಿ ಗುರುವಾರ ಇಬ್ಬರು ಜೊತೆಯಾಗಿರುವುದನ್ನು ಗಮನಿಸಿದ ಹಿಂದೂ ಕಾರ್ಯಕರ್ತರು ಯುವಕನನ್ನು ಪ್ರಶ್ನಿಸಿ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೀಡಿಯೋ ಶುಕ್ರವಾರ ವೈರಲ್ ಆಗಿದ್ದು, ಸ್ಥಳಕ್ಕೆ ಬಂದರು ಠಾಣೆ ಪೊಲೀಸರು ಆಗಮಿಸುತ್ತಿದ್ದಂತೆ ಜೋಡಿ ಮೇಲೆ ಹಲ್ಲೆಗೆ ಯತ್ನಿಸಿದ ಕಾರ್ಯಕರ್ತರು ಸ್ಥಳದಿಂದ ಪರಾರಿ ಆಗಿದ್ದಾರೆ. ಬಂದರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
