Connect with us

    LATEST NEWS

    ಹಿಂದೂ ಯವತಿಯ ಜೊತೆ ಮಾತನಾಡಿದ್ದಕ್ಕೆ ಮುಸ್ಲಿಂ ಯುವಕನ ಮೇಲೆ ಹಲ್ಲೆ

    ಉಜಿರೆ ಏಪ್ರಿಲ್ 05: ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪರಿಚಯಸ್ಥ ಹಿಂದೂ ಯುವತಿಯ ಜೊತೆ ಮಾತನಾಡಿದ್ದಕ್ಕೆ ಗ್ಯಾಂಗ್ ವೊಂದು ಮುಸ್ಲಿಂ ಯುವಕ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಉಜಿರೆ ಬಳಿ ಬಸ್‌ನಲ್ಲಿ ನಡೆದಿದೆ.

     

    ಹಲ್ಲೆಗೊಳಗಾದ ಯುವಕನನ್ನು ಮೊಹಮ್ಮದ್ ಜಹೀರ್ (22) ಎಂದು ಗುರುತಿಸಲಾಗಿದೆ.

    ಗಾಯಗೊಂಡ ಯುವಕನನ್ನು ನಂತರ ಆಸ್ಪತ್ರೆಗೆ ದಾಖಲಿಸಲಾಯಿತು. ಯುವಕನ ದೂರಿನ ಆಧಾರದ ಮೇಲೆ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಸ್ಲಿಂ ಯುವಕ ಹಿಂದೂ ಯುವತಿಯೊಂದಿಗೆ ಮಾತನಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ನಂತರ ಹಿಂದೂ ಸಂಘಟನೆಯ ಕಾರ್ಯಕರ್ತರ ಗುಂಪು ಬಸ್‌ಗೆ ಏರಿತು. ಯುವಕನಿಗೆ ಥಳಿಸುವ ಮುನ್ನ ಆತನನ್ನು ಬಸ್‌ನಿಂದ ಕೆಳಗಿಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.

    Share Information
    Advertisement
    Click to comment

    You must be logged in to post a comment Login

    Leave a Reply