DAKSHINA KANNADA
ಮೂಡುಬಿದಿರೆ : ನಡುರಸ್ತೆಯಲ್ಲಿ ಪ್ರೀತಿಸುವಂತೆ ಹಿಂದೂ ಯುವತಿ ಮೇಲೆ ಹಲ್ಲೆಗೈದ ಅನ್ಯಮತೀಯನ ಹೆಡೆಮುರಿ ಕಟ್ಟಿದ ಖಾಕಿ..!
ಮೂಡುಬಿದಿರೆ : ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿ ಯುವತಿಯೊಬ್ಬಳಿಗೆ ನಡು ರಸ್ತೆಯಲ್ಲಿ ಅಡ್ಡ ಹಾಕಿ ಹಲ್ಲೆಗೈದಿದ್ದ ಅನ್ಯ ಮತೀಯ ಕಾಮುಕನನ್ನು ಮೂಡುಬಿದಿರೆ ಪೊಲೀಸರು ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ.
ಇರುವೈಲಿನ ಅರ್ಶದ್ (21) ಬಂಧಿತ ಆರೋಪಿಯಾಗಿದ್ದಾನೆ. ಇಲ್ಲಿನ ಆಳ್ವಾಸ್ ರಸ್ತೆಯ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಕೋಟೆಬಾಗಿಲು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅರ್ಶದ್ ಪದೇ ಪದೇ ಬಂದು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಇವನ ಕಾಟಕ್ಕೆ ಬೇಸತ್ತ ಯುವತಿಯ ಮನೆಯವರು ಆಕೆಯನ್ನು ಕೆಲಸಕ್ಕೆ ಕಳುಹಿಸಿದೇ ಮನೆಯಲ್ಲಿ ಇರಿಸಿದ್ದರು. ಯುವತಿ ಗುರುವಾರ ಸಂಜೆ ಮೂಡಬಿದ್ರೆ ಪೇಟೆಗೆ ಬಂದು ಟೈಲರ್ ಅಂಗಡಿಗೆ ಹೋಗಿದ್ದ ಸಂದರ್ಭದಲ್ಲಿ ಆರೋಪಿ ಅರ್ಶದ್ ಅಡ್ಡಗಟ್ಟಿ ಯಾಕೆ ನೀನು ಮೊಬೈಲ್ ಕರೆ ಸ್ವೀಕರಿಸುತ್ತಿಲ್ಲ ಎಂದು ಜಗಳವಾಡಿ ಸಾರ್ವಜನಿಕ ರಸ್ತೆಯಲ್ಲಿ ಯುವತಿಗೆ ಹಲ್ಲೆ ನಡೆಸಿ ಧಮ್ಕಿ ಹಾಕಿದ್ದ. ಈ ಬಗ್ಗೆ ಯುವತಿ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವೃತ್ತನಿರೀಕ್ಷಕ ಸಂದೇಶ್ ಪಿ.ಜಿ. ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.ಮೂಲತಃ ಇರುವೈಲಿನವನಾದ ಅರ್ಷದ್, ಈ ಹಿಂದೆ ಮೂಡುಬಿದಿರೆ ಕೊಡಂಗಲ್ಲು ಪಿಲಿಪಂಜರ ಎಂಬಲ್ಲಿ ವಾಸವಿದ್ದ. ಬಳಿಕ ಕೋಟೆಬಾಗಿಲಿನಲ್ಲಿ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದ ತಿಳಿದು ಬಂದಿದೆ.
You must be logged in to post a comment Login