LATEST NEWS
ಮೂಡಬಿದಿರೆ – ಚಿರತೆ ಬಾಯಿಗೆ ಸಿಕ್ಕರೂ ಪ್ರಾಣ ಉಳಿಸಿಕೊಂಡ ನಾಯಿ

ಮೂಡಬಿದಿರೆ : ಬೇಟೆಯಾಡಲು ಬಂದ ಚಿರತೆಯ ಬಾಯಿಗೆ ಸಿಕ್ಕಿದರೂ ಕೂಡ ಕೊನೆ ಕ್ಷಣದಲ್ಲಿ ನಾಯಿಯೊಂದು ಪ್ರಾಣ ಉಳಿಸಿಕೊಂಡಿರುವ ಘಟನೆ ಮೂಡುಬಿದಿರೆ ತಾಲೂಕಿನ ಪಡುಕೊಣಾಜೆ ಎಂಬಲ್ಲಿ ನಡೆದಿದೆ. ಚಿರತೆ ನಾಯಿಯನ್ನು ಹಿಡಿಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮೂಡುಬಿದಿರೆ ತಾಲೂಕಿನ ಪಡುಕೊಣಾಜೆಯ ಸತೀಶ್ ಎಂಬವರ ಮನೆಯ ಬಳಿ ಗುರುವಾರ ರಾತ್ರಿ ಅಡ್ಡಾಡುತ್ತಿದ್ದ ಚಿರತೆ ಮನೆಯಂಗಳದಲ್ಲಿ ಮಲಗಿದ್ದ ನಾಯಿಯನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸಿದೆ. ಚಿರತೆ ಕಾಂಪೌಂಡ್ ಹಾರುವಾಗ ಬಾಯಿಯಿಂದ ನಾಯಿ ಜಾರಿ ಬಿದಿದ್ದು ಪ್ರಾಣ ಉಳಿಸಿಕೊಂಡಿದೆ.

ಸ್ಥಳಕ್ಕೆ ಉಪವಲಯಾರಣ್ಯಾಧಿಕಾರಿ ಮಂಜುನಾಥ ಗಾಣಿಗ ಮತ್ತು ಸಿಬಂಧಿಗಳು ಭೇಟಿ ನೀಡಿದ್ದಾರೆ.ಶಿರ್ತಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಜೊತೆ ಮಾತುಕತೆ ನಡೆಸಿದ್ದು ಚಿರತೆಯನ್ನು ಹಿಡಿಯಲು ಬೋನು ಇಡಲು ನಿರ್ಧರಿಸಲಾಗಿದೆ.
https://youtu.be/DwHcmcCY_OM