LATEST NEWS
ಕೇರಳ ಪ್ರವೇಶಿಸಿದ ಮುಂಗಾರು – ಹವಾಮಾನ ಇಲಾಖೆ
ನವದೆಹಲಿ ಜೂನ್ 08 :ಬಿಪೋರ್‌ಜಾಯ್ ಚಂಡಮಾರುತದ ಪ್ರಭಾವದ ನಡುವೆಯೂ ಕೇರಳಕ್ಕೆ ಮುಂಗಾರು ಮಳೆ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ವಾಡಿಕೆಗಿಂತ ಸುಮಾರು ಒಂದು ವಾರ ತಡವಾಗಿ ಪ್ರವೇಶಿಸಿದ ಮುಂಗಾರು ಅಬ್ಬರವಿಲ್ಲದೆ ಸಾಮಾನ್ಯವಾಗಿರಲಿದೆ. ’ಬಿಪೋರ್‌ಜಾಯ್’ ಚಂಡಮಾರುತವು ನೈರುತ್ಯ ಮುಂಗಾರಿನ ಮೇಲೆ ಪ್ರಭಾವ ಬೀರಿದ್ದು, ಕೇರಳದಲ್ಲಿ ಇದರ ಪ್ರಭಾವ ಸೌಮ್ಯವಾಗಿದೆ.
ಅರಬ್ಬಿ ಸಮುದ್ರದ ದಕ್ಷಿಣ ಭಾಗ, ಕೇಂದ್ರ, ಲಕ್ಷ್ಮದ್ವೀಪದ ಸಂಪೂರ್ಣ ಪ್ರದೇಶ, ಕೇರಳದ ಬಹುತೇಕ ಭಾಗ, ದಕ್ಷಿಣ ತಮಿಳುನಾಡಿನ ಭಾಗಗಳು, ಕಮೋರಿನ್, ಮನ್ನಾರ್‌ನ ಕೊಲ್ಲಿ ಪ್ರದೇಶಗಳಲ್ಲಿ, ನೈರುತ್ಯ, ಕೇಂದ್ರ ಹಾಗೂ ಈಶಾನ್ಯನ ಬಂಗಾಳ ಕೊಲ್ಲಿ ಭಾಗಗಳಲ್ಲಿ ಮುಂಗಾರು ಚುರುಕುಗೊಂಡಿದೆ ಎಂದು ಇಲಾಖೆ ಹೇಳಿದೆ.
ಸಾಮಾನ್ಯವಾಗಿ ಜೂನ್ 1ರಂದು ಮುಂಗಾರು ಕೇರಳ ಪ್ರವೇಶಿಸುವುದು ವಾಡಿಕೆ. ಆದರೆ ಈ ಬಾರಿ ಏಳು ದಿನ ತಡವಾಗಿದೆ. ಜೂನ್ 4ರಂದು ಕೇರಳಕ್ಕೆ ಮುಂಗಾರು ಪ್ರವೇಶವಾಗಲಿದೆ ಎಂದು ಮೇ ಮಧ್ಯದಲ್ಲಿ ಐಎಂಡಿ ಹೇಳಿತ್ತು. ಜೂನ್ 7ರಂದು ಮುಂಗಾರು ಕೇರಳ ಪ್ರವೇಶಿಸಲಿದೆ ಎಂದು ಸ್ಕೈಮೆಟ್ ವರದಿ ಮಾಡಿತ್ತು.