LATEST NEWS
ಮನೆಯ ಟೆರೆಸ್ ನಿಂದ 4 ತಿಂಗಳ ಮಗುವನ್ನು ಎಸೆದ ಕೋತಿ..ಮಗು ಸ್ಥಳದಲ್ಲೇ ಸಾವು

ಉತ್ತರಪ್ರದೇಶ ಜುಲೈ 18: ಕೋತಿಯೊಂದು ಮಗುವನ್ನು ಕಿತ್ತಕೊಂಡು ಮೂರನೇ ಅಂತಸ್ತಿನ ಮನೆಯ ಛಾವಣೆಯಿಂದ ಎಸೆದ ಪರಿಣಾಮ ಮಗು ಸಾವನಪ್ಪಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಶಾಹಿ ಪೊಲೀಸ್ ಠಾಣೆ ವ್ಯಾಪ್ತಿಯ ಬರೇಲಿ ಡಂಕಾ ಪ್ರದೇಶದಲ್ಲಿ ಈ ಘಟನೆ ನಡೆದಿದು, ಬರೇಲಿಯ ಡುಂಕಾ ಗ್ರಾಮದ ನಿವಾಸಿ 25 ವರ್ಷದ ನಿರ್ದೇಶ್ ಉಪಾಧ್ಯಾಯ ಅವರು ತಮ್ಮ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಪತ್ನಿ ಜೊತೆಗೆ ಸಂಜೆ ಮೂರು ಅಂತಸ್ತಿನ ಮನೆಯ ಟೆರೇಸ್‍ನಲ್ಲಿ ವಾಕಿಂಗ್ ಮಾಡುತ್ತಿದ್ದರು.

ಈ ವೇಳೆ ಇದ್ದಕ್ಕಿದ್ದಂತೆ ಛಾವಣಿಯ ಮೇಲೆ ಕೋತಿಗಳ ಹಿಂಡು ಬಂದಿದೆ. ಇದರಿಂದ ಗಾಬರಿಗೊಂಡ ದಂಪತಿ ಕೋತಿಗಳನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಆದರೆ ಈ ವೇಳೆ ನಿರ್ದೇಶ್ ಉಪಾಧ್ಯಾಯ ಅವರನ್ನು ಕೋತಿಗಳು ಸುತ್ತುವರಿದವು ಕೊನೆಗೆ ಮೆಟ್ಟಿಲಿನಿಂದ ಮನೆಗೆ ಹೋಗುವ ಪ್ರಯತ್ನಿಸುವಾಗ ಕೈ ಜಾರಿ ಮಗು ಕೆಳಗೆ ಬಿದ್ದಿದೆ. ಮಗುವನ್ನು ನಿರ್ದೇಶ್ ಹಿಡಿದುಕೊಳ್ಳುವಷ್ಟೋತ್ತಿಗೆ ಕೋತಿಯೊಂದು ಮಗುವನ್ನು ಎತ್ತಿಕೊಂಡು ಛಾವಣಿ ಮೇಲಿಂದ ಕೆಳಗೆ ಎಸೆದಿದೆ. ಇದರಿಂದಾಗಿ ಮಗು ಕೆಳಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದೆ.