LATEST NEWS
ಉಡುಪಿಯಲ್ಲಿ ವಿದೇಶಿ ಮಹಿಳೆಗೆ ಮಂಗನ ಕಾಯಿಲೆ ಸೋಂಕು

ಉಡುಪಿಯಲ್ಲಿ ವಿದೇಶಿ ಮಹಿಳೆಗೆ ಮಂಗನ ಕಾಯಿಲೆ ಸೋಂಕು
ಉಡುಪಿ, ಫೆಬ್ರವರಿ 04 : ಕರಾವಳಿ ಮತ್ತು ಮಲೆನಾಡಿನಲ್ಲಿ ಮಂಗನ ಕಾಯಿಲೆ ಸಮಸ್ಯೆ ತೀವ್ರವಾಗಿ ಉಲ್ಬಣಗೊಳ್ಳುತ್ತಿದೆ. ಈಗಾಗಲೇ ಹತ್ತಾರು ಜನ ಈ ಮಾರಕ ಕಾಯಿಲೆಗೆ ಜೀವ ಕಳಕೊಂಡಿದ್ದಾರೆ. ಅನೇಕರು ವಿವಿಧ ಆಸ್ಪತ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದು ವಿದೇಶಿಯರನ್ನು ಬಿಟ್ಟಿಲ್ಲ. ಫ್ರಾನ್ಸ್‌ನಿಂದ ಉಡುಪಿಗೆ ಪ್ರವಾಸಕ್ಕೆ ಬಂದಿದ್ದ 33 ವರ್ಷದ ವಿದೇಶಿ ಮಹಿಳೆಯೊಬ್ಬರಲ್ಲಿ ಇದೀಗ ಮಂಗನ ಕಾಯಿಲೆಯ ಸೋಂಕು ಕಾಣಿಸಿಕೊಂಡಿದೆ.

ಸದ್ಯ ಮಣಿಪಾಲದ ಕೆಎಂಸಿಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರವಾಸಿಯಾಗಿ ಕರಾವಳಿಗೆ ಬಂದ ಈಕೆ ಆನೇಕ ಕಡೆ ಪ್ರವಾಸ ಮಾಡಿದ್ದರು. ಜಿಲ್ಲೆಯ ಹಲವೆಡೆ ಪ್ರವಾಸ ಮಾಡುವಾಗ ಈ ಸೋಂಕು ಹರಡಿದೆ ಎನ್ನಲಾಗಿದೆ.
ಕೆಎಂಸಿಯಲ್ಲಿ ಇದುವರೆಗೂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ 152 ಮಂದಿ ಶಂಕಿತ ಮಂಗನ ಕಾಯಿಲೆಗೆ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಈ ಪೈಕಿ 55 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 89 ಮಂದಿಯಲ್ಲಿ ಕಾಣಿಸಿಕೊಂಡಿಲ್ಲ.
ಸದ್ಯ 30 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದುವರೆಗೂ ಶಿವಮೊಗ್ಗ ಜಿಲ್ಲೆಯ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಮಣಿಪಾಲ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.