ಬಾಬ್ರಿ ವಿವಾದ ವೈಭವಿಕರಣ: ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲರ ಮೇಲೆ ಪ್ರಕರಣ ದಾಖಲು

ಮಂಗಳೂರು, ಫೆಬ್ರವರಿ 03 : ಬಾಬ್ರಿ ಮಸೀದಿ ಧ್ವಂಸ ವಿಷಯದ ಮೂಲಕ ಶಾಂತಿ ಕದಡುವ ಪ್ರಯತ್ನ ವಿಚಾರವಾಗಿ ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅತಾವುಲ್ಲ ಜೋಕಟ್ಟೆ ಹಾಗೂ ಇತರರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.

ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲು ಮಾಡಲಾಗಿದೆ.

ಉಳ್ಳಾಲದಲ್ಲಿ ಎಸ್‌ಡಿಪಿಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾಬ್ರಿ ಮಸೀದಿ ಧ್ವಂಸ ವಿಚಾರವನ್ನು ಅತಿರೇಕವಾಗಿ ಪ್ರದರ್ಶಿಸಿದ್ದ ಹಿನ್ನೆಲೆಯಲ್ಲಿ ರಾಜಕೀಯ ಸಂಘಟನೆ ಎಸ್‌ಡಿಪಿಐ ಮತ್ತು ಅದರ ಜಿಲ್ಲಾ ಅಧ್ಯಕ್ಷರಾದ ಅತಾವುಲ್ಲಾ ಜೋಕಟ್ಟೆ ಅವರ ಮೇಲೆ ಉಳ್ಳಾಲ ಪೊಲೀಸರು ಸ್ವ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಬಾಬ್ರಿ ಮಸೀದಿ ಧ್ವಂಸವನ್ನು ವಿಡಿಯೋ ಮೂಲಕವೂ ಪ್ರದರ್ಶಿಸಿ ಶಾಂತಿ ಕದಡಲು ಯತ್ನಿಸಿದ್ದಾರೆ ಎಂದು ಪೊಲೀಸರು ಸ್ವಯಂ ಪ್ರೇರಿತ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ಸಂಬಂಧಿಸಿ ತನಿಖೆ ಕೂಡ ಆರಂಭಿಸಿದ್ದಾರೆ.

2 Shares

Facebook Comments

comments