FILM
ಮಮ್ಮುಟ್ಟಿಗಾಗಿ ಶಬರಿಮಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಟ ಮೋಹನ್ ಲಾಲ್

ಶಬರಿಮಲೆ ಮಾರ್ಚ್ 19: ಮಲಯಾಳಂ ನಟ ಮೋಹನ್ ಲಾಲ್ ಅವರು ತಮ್ಮ ‘ಎಂಪುರಾನ್’ ಚಿತ್ರ ಬಿಡುಗಡೆಗೂ ಮುನ್ನ ಮಂಗಳವಾರ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ವೇಳೆ ಅವರು ತಮ್ಮ ಆತ್ಮೀಯ ಗೆಳೆಯ ನಟ ಮಮ್ಮುಟ್ಟಿ ಅವರಿಗೂ ಪ್ರಾರ್ಥನೆ ಸಲ್ಲಿಸಿದರು. ಅವರಿಗೆ ಕೊಲೊನ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂಬ ವದಂತಿಗಳ ಮೋಹನ್ ಲಾಲ್ ಅವರ ವಿಶೇಷ ಪೂಜೆ ಎಲ್ಲರ ಗಮನ ಸೆಳೆದಿದೆ.
ಮೋಹನ್ ಲಾಲ್ ಅವರು ಮಂಗಳವಾರ ಶಬರಿಮಲೆಗೆ ತೆರಳಿ ದೇವರ ದರ್ಶನ ಪಡೆಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಪಂಪಾದಲ್ಲಿ ಇರುಮುಡಿ ಕಟ್ಟುವ ಮೂಲಕ ಮೆಟ್ಟಿಲುಗಳನ್ನು ಏರಿ ಮೋಹನ್‌ಲಾಲ್ ಶಬರಿಮಲೆಗೆ ತೆರಳಿದ್ದಾರೆ. ಬಹುನಿರೀಕ್ಷಿತ ‘ಎಂಪುರಾನ್’ ಬಿಡುಗಡೆಗೆ ಕೆಲವೇ ದಿನಗಳಿರುವಂತೆಯೇ ಮೋಹನ್‌ಲಾಲ್ ಶಬರಿಮಲೆಗೆ ಭೇಟಿ ನೀಡಿದ್ದಾರೆ.

ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಮೋಹನ್‌ಲಾಲ್ ಅಭಿನಯದ ‘ಎಲ್-2: ಎಂಪುರಾನ್’ ಮಾರ್ಚ್ 27ರಂದು ತೆರೆಕಾಣಲಿದೆ. 2019ರಲ್ಲಿ ತೆರೆಕಂಡಿದ್ದ, ಭಾರಿ ಯಶಸ್ಸು ಕಂಡಿದ್ದ’ಲೂಸಿಫರ್’ ಚಿತ್ರದ ಎರಡನೇ ಭಾಗ ಇದಾಗಿದೆ. ವರದಿಗಳ ಪ್ರಕಾರ, ಮೋಹನ್ ಲಾಲ್ ಅವರು ಮಮ್ಮುಟ್ಟಿ ಅವರ ಜನ್ಮನಾಮವಾದ ಮುಹಮ್ಮದ್ ಕುಟ್ಟಿ ಮತ್ತು ಅವರ ಪತ್ನಿ ಸುಚಿತ್ರಾ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಲ್ಲದೆ ಪೂಜೆಗೂ ಮೊದಲು ಅವರು ಮಮ್ಮುಟ್ಟಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು ಎಂದು ವರದಿಯಾಗಿದೆ.