KARNATAKA
ಭಾರತದ ಏಕೈಕ ಜಾಗತಿಕ ನಗರ, ಶ್ರೀಮಂತ ನಗರ ಬೆಂಗಳೂರು ಈಗ ಕಸದ ನಗರ

ಬೆಂಗಳೂರು ಅಕ್ಟೋಬರ್ 03: ಸ್ವಚ್ಚ ಸರ್ವೇಕ್ಷಣಾ ಶ್ರೇಯಾಂಕದಲ್ಲಿ ಬೆಂಗಳೂರಿಗೆ 45 ನಗರಗಳ ಪಟ್ಟಿಯಲ್ಲಿ 43ನೇ ಸ್ಥಾನ ಸಿಕ್ಕಿರುವುದಕ್ಕೆ ಇದೀಗ ಆಕ್ರೋಶ ವ್ಯಕ್ತವಾಗಿದ್ದು, ಇದಕ್ಕೆ ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು ಇದು ಎಂತಹ ಅವಮಾನ? ಭಾರತದ ಏಕೈಕ ಜಾಗತಿಕ ನಗರ, ಶ್ರೀಮಂತ ನಗರ ಬೆಂಗಳೂರು ಕಸದ ನಗರವಾಯಿತು. ನಾಚಿಕೆಯಾಗುತ್ತಿದೆ’ ಎಂದು ಅವರು ಹೇಳಿಕೊಂಡಿದ್ದಾರೆ. ಕಟ್ಟುನಿಟ್ಟಾದ, ತುರ್ತು ಸುಧಾರಣಾ ಕ್ರಮಗಳಿಗೆ ಆಗ್ರಹಿಸಿರುವ ಪೈ, ತಮ್ಮ ಟ್ವೀಟ್ ಅನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಟ್ಯಾಗ್ ಮಾಡಿದ್ದಾರೆ.
