LATEST NEWS
ನಾನು 250 ಕೋಟಿ ರೂಪಾಯಿ ಸಾಲದ ಶ್ರೀಮಂತ – ಮೋಹನ್ ಆಳ್ವ
ಮಂಗಳೂರು ಮಾರ್ಚ್ 27: ಸಾಲ ಇದ್ದರೆ ಮನುಷ್ಯ ಕ್ರಿಯಾಶೀಲನಾಗಿರುತ್ತಾನೆ, ಇಲ್ಲದಿದ್ದರೆ ಹೆಬ್ಬಾವಿನಂತೆ ಆಗುತ್ತೇವೆ. ಅದೆ ಕಾರಣಕ್ಕೆ ನಾನು ₹250 ಕೋಟಿ ಸಾಲ ಇರುವ ಧನಿಕ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಹೇಳಿದರು.
ಮಂಗಳವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಂಗಳೂರು ಪ್ರೆಸ್ ಕ್ಲಬ್‌ನ ಗೌರವ ಅತಿಥಿಯಾಗಿ ಭಾಗವಹಿಸಿದ್ದ ಅವರು ತಮ್ಮ ಜೀವನಗಾಥೆಯನ್ನು ವಿವರಿಸಿದರು. ಈ ವೇಳೆ ಮಾತನಾಡಿದ ಅವರಪ ಡಾ.ಮೋಹನ ಆಳ್ವರು 250 ಕೋಟಿ ರು. ಸಾಲದ ಧನಿಕ. ನಾನು ಕ್ಲಿನಿಕ್ ತೆರೆಯುವಾಗ 1 ಲಕ್ಷ ರು. ರು. ಸಾಲ ಮಾಡಿದ್ದೆ. ನನ್ನ 125 ಎಕರೆ ವಿಶಾಲ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದ ಕ್ಯಾಂಪಸ್ ಅಭಿವೃದ್ಧಿಯಾಗಿದ್ದು, ಈಗ 250 ಕೋಟಿಗಳಷ್ಟು ಸಾಲ ಇದೆ. ಸಾಲ ಮಾಡುವುದು, ಸಾಲ ಮರು ಪಾವತಿಸುವುದರಲ್ಲಿ ಖುಷಿ ಇದೆ, ಸಾಲ ನಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡುತ್ತದೆ, ಸಾಲ ಇಲ್ಲದಿದ್ದರೆ, ಅದು ಹೆಬ್ಬಾವಿನಂತೆ ಆಲಸ್ಯತನಕ್ಕೆ ಕಾರಣವಾಗುತ್ತದೆ ಎಂದರು.
ಇನ್ನು ಮುಂದೆ ನುಡಿಸಿರಿ ಕಾರ್ಯಕ್ರಮ ಕೇವಲ ಸಾಹಿತ್ಯ ಆಸಕ್ತರಿಗೆ ಮಾತ್ರ ಸೀಮಿತವಾಗಿರುತ್ತದೆ. ಈ ಹಿಂದಿನಂತೆ ಬೇಕಾಬಿಟ್ಟಿ ಜಾತ್ರೆಯಂತೆ ಇರುವುದಿಲ್ಲ ಎಂದು ನುಡಿಸಿರಿ ರೂವಾರಿ ಡಾ.ಮೋಹನ ಆಳ್ವ ಹೇಳಿದರು. ಈ ಬಾರಿಯ ನುಡಿಸಿರಿಗೆ ಆಸಕ್ತ ಸಾಹಿತ್ಯಾಸಕ್ತರನ್ನು ಆಹ್ವಾನಿಸಿ ವಿಭಿನ್ನ ರೀತಿಯಲ್ಲಿ ಮೂರು ದಿನಗಳ ಕಾಲ ಸಂಘಟಿಸಲಾಗುವುದು. ಆದರೆ ರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮ ವಿರಾಸತ್ ಎಂದಿನಂತೆಯೇ ನಡೆಯಲಿದೆ ಎಂದರು.