LATEST NEWS
ಮಂಗಳೂರು ಮೀನುಗಾರಿಕಾ ಬಂದರಿಗೆ ‘ದಿ. ಲೋಕನಾಥ ಬೋಳಾರ್’ ಹೆಸರಿಡಲು ಮೊಗವೀರ ಸಮಾಜ ಆಗ್ರಹ
ಮೊಗವೀರ ಸಮಾಜ ಉನ್ನತಿಗೆ ಮತ್ತು ಕ್ರೀಡಾ ಲೋಕಕ್ಕೆ ನೀಡಿದ ಕೊಡುಗೆಯನ್ನು ಗಮನಿಸಿ ಮಂಗಳೂರು ಮೀನುಗಾರಿಕಾ ಬಂದರಿಗೆ ‘ದಿ. ಲೋಕನಾಥ ಬೋಳಾರ್’ ಹೆಸರಿಡಲು ಮೊಗವೀರ ಸಮಾಜ ಆಗ್ರಹಿಸಿದೆ.
ಮಂಗಳೂರು : ಮೊಗವೀರ ಸಮಾಜ ಉನ್ನತಿಗೆ ಮತ್ತು ಕ್ರೀಡಾ ಲೋಕಕ್ಕೆ ನೀಡಿದ ಕೊಡುಗೆಯನ್ನು ಗಮನಿಸಿ ಮಂಗಳೂರು ಮೀನುಗಾರಿಕಾ ಬಂದರಿಗೆ ‘ದಿ. ಲೋಕನಾಥ ಬೋಳಾರ್’ ಹೆಸರಿಡಲು ಮೊಗವೀರ ಸಮಾಜ ಆಗ್ರಹಿಸಿದೆ.
ಮೊಗವೀರ ಸಮಾಜ ಉನ್ನತಿಗೆ ಮತ್ತು ಕ್ರೀಡಾ ಲೋಕಕ್ಕೆ ಮಹತ್ತರ ಕೊಡುಗೆ ನೀಡಿದ ದಿವಂಗತ ಲೋಕನಾಥ ಬೋಳಾರ್ ಅವರ ಸ್ಮರಣಾರ್ಥ ಕರ್ನಾಟಕ ರಾಜ್ಯ ಜ್ಯೂನಿಯರ್ ಅತ್ಲೆಟಿಕ್ ಕ್ರೀಡಾ ಕೂಟವನ್ನು ಮಂಗಳೂರಿನಲ್ಲಿ ಆಯೋಜಿಸಲಾಗಿದೆ.
ಸೆಪ್ಟೆಂಬರ್ 27 ರಿಂದ 5 ದಿನಗಳ ಕಾಲ ನಗರದ ಮಂಗಳಾ ಕ್ರೀಡಾಂಗದಲ್ಲಿ ಆಯೋಜಿಸಿರುವ ಈ ಕ್ರೀಡಾ ಕೂಟವನ್ನು ನಾಡೋಜ ಜಿ.ಶಂಕರ್ ಅವರು ಉದ್ಘಾಟಿಸಲಿದ್ದು ಸರ್ಕಾರದ ಪ್ರತಿನಿಧಿಗಳು, ರಾಜಕೀಯ ಮತ್ತು ಸಮಾಜ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿದ್ದಾರೆ.
ಈ ಕ್ರೀಡಾ ಕೂಟದಲ್ಲಿ ರಾಜ್ಯದ 30 ಜಿಲ್ಲೆಗಳಿಂದ 1,500 ಕ್ಕೂ ಅಧಿಕ ಕ್ರೀಡಾ ಪಟುಗಳು ಮತ್ತು 200 ಕ್ಕೂ ಅಧಿಕ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ ಇದರ ಕಾರ್ಯಧ್ಯಕ್ಷರಾದ ಭರತ್ ಕುಮಾರ್ ಉಳ್ಳಾಲ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದರು.
ಉತ್ತಮ ಕ್ರೀಡಾ ಪಟುವಾಗಿದ್ದ ದಿವಂಗತ ಲೋಕನಾಥ ಬೋಳಾರ್ ದೇಶ ವಿದೇಶಗಳ ಅನೇಕ ಕ್ರೀಡಾ ಸ್ಪರ್ಧೆಗಳಲ್ಲಿ ದೇಶಕ್ಕೆ ಆನೇಕ ಸ್ವರ್ಣ ಪದಕಗಳನ್ನು ತಂದಿದ್ದಾರೆ.
ಮೀನುಗಾರರ ಏಳಿಗೆಗೂ ಬೋಳಾರ್ ಅವರ ಕೊಡುಗೆ ಅಪಾರವಾಗಿದ್ದು ಅನೇಕ ಮೀನುಗಾರಿಕಾ ಸವಲತ್ತುಗಳನ್ನು ಒದಗಿಸಿಕೊಡುವಲ್ಲಿ ಪ್ರಮುಖರಾಗಿದ್ದಾರೆ.
ಈ ನಿಟ್ಟಿನಲ್ಲಿ ಅವರ ಸ್ಪರಣಾರ್ಥ ಮಂಗಳೂರು ಮೀನುಗಾರಿಕಾ ಬಂದರಿಗೆ ದಿವಂಗತ ಲೋಕಾನಾಥ ಬೋಳಾರ್ ಅವರ ಹೆಸರನ್ನು ಇಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.