Connect with us

    LATEST NEWS

    ಕಾಸರಗೋಡು : ಆಟೋ ರಿಕ್ಷಾ ಹಾಗೂ ಶಾಲಾ ಬಸ್ ಪರಸ್ಪರ ಡಿಕ್ಕಿ- ನಾಲ್ವರು ಮೃತ್ಯು..!

    ಕಾಸರಗೋಡಿನ ಬದಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಳ್ಳತ್ತಡ್ಕ ಎಂಬಲ್ಲಿ ಸೋಮವಾರ ಸಂಜೆ  ಆಟೋರಿಕ್ಷಾ ಮತ್ತು ಶಾಲಾ ಬಸ್ ನಡುವೆ ಡಿಕ್ಕಿ ಸಂಭವಿಸಿ ನಾಲ್ವರು ಮೃತಪಟ್ಟಿದ್ದಾರೆ.

    ಕಾಸರಗೋಡು : ಕಾಸರಗೋಡಿನ ಬದಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಳ್ಳತ್ತಡ್ಕ ಎಂಬಲ್ಲಿ ಸೋಮವಾರ ಸಂಜೆ  ಆಟೋರಿಕ್ಷಾ ಮತ್ತು ಶಾಲಾ ಬಸ್ ನಡುವೆ ಡಿಕ್ಕಿ ಸಂಭವಿಸಿ ನಾಲ್ವರು ಮೃತಪಟ್ಟಿದ್ದಾರೆ.

    ಪೆರ್ಲ ಭಾಗದಿಂದ ತೆರಳುತ್ತಿದ್ದ ಮಾನ್ಯದ ಆಂಗ್ಲ ಮಾಧ್ಯಮ ಶಾಲೆಗೆ ಸೇರಿದ ಬಸ್ ಮತ್ತು ಮೊಗ್ರಲ್ ಪುತ್ತೂರು ಮೂಲದ ರಿಕ್ಷಾ ಅಪಘಾತಕ್ಕಿಡಾಗಿರುವುದಾಗಿ ಪ್ರಾಥಮಿಕ ವರದಿಯಾಗಿದೆ.

    ರಿಕ್ಷಾದಲ್ಲಿ ಸಂಚರಿಸುತ್ತಿದ್ದ  ಡ್ರೈವರ್ ಸಹಿತ ಒರ್ವ ಪುರುಷ ಹಾಗೂ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ.

    ಮಕ್ಕಳನ್ನು ಪೆರ್ಲ ಭಾಗದಲ್ಲಿ ಇಳಿಸಿದ ಶಾಲಾ ಬಸ್ ಖಾಲಿಯಾಗಿ ಸಂಚರಿಸುತ್ತಿದ್ದಾಗ ಪಳ್ಳತ್ತಡ್ಕದ ಗುಳಿಗ ಬನದ ಅನತಿ ದೂರದ ತಿರುವಿನಲ್ಲಿ ಈ ದುರ್ಘಟನೆ ನಡೆದಿದೆ.

    ಮೃತರ ಪರಿಚಯ ಸ್ಥಳದಲ್ಲಿ ಇದ್ದವರಿಗೆ ಮಾಹಿತಿ ಲಭಿಸಿಲ್ಲವಾದ್ದರಿಂದ ಗುರುತು ಪತ್ತೆ ಹಚ್ಚಲು ಗಂಟೆಗಳಷ್ಟು ಕಾಲ ಪರದಾಡಬೇಕಾಯಿತು.

    ಮೃತದೇಹವನ್ನು‌ ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ.

    ಡಿಕ್ಕಿಯ ರಭಸಕ್ಕೆ ಆಟೋ ಸಂಪೂರ್ಣ ಜಖಂಗೊಂಡಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply