LATEST NEWS
ನವಜೋಡಿಗೆ ಮದುವೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ನವಜೋಡಿಗೆ ಮದುವೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ
ಪುತ್ತೂರು ಎಪ್ರಿಲ್ 23: ಪುತ್ತೂರಿನ ನವಜೋಡಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಪತ್ರ ಕಳುಹಿಸಿದ್ದಾರೆ. ಪುತ್ತೂರಿನ ಉಪ್ಪಿನಂಗಡಿಯ ನಿಶಿತ್ ಶೆಟ್ಟಿ ಹಾಗೂ ಡಾ.ಕೃತಿಕಾ ಅವರು ಎಪ್ರಿಲ್ 19 ರಂದು ವಿವಾಹವಾಗಿದ್ದರು. ಇವರ ವಿವಾಹಕ್ಕೆ ಶುಭಾಶಯ ತಿಳಿಸಿ ಪತ್ರವೊಂದನನ್ನು ಪ್ರಧಾನಿ ನರೇಂದ್ರ ಮೋದಿ ಕಳುಹಿಸಿದ್ದಾರೆ. ಪ್ರಧಾನಿ ಮೋದಿ ಶುಭಾಶಯಕ್ಕೆ ಮದುವೆ ಮನೆಯಲ್ಲಿ ಸಂಭ್ರಮ ದ್ವಿಗುಣಗೊಂಡಿದೆ. ದೇಶದ ಪ್ರಧಾನಿ ತಮ್ಮ ಕಾರ್ಯದೊತ್ತಡ ಮಧ್ಯೆ ಕೂಡ ತಮ್ಮ ಮದುವೆಗೆ ಹಾರೈಸಿ ಶುಭಾಶಯ ಪತ್ರ ಕಳುಹಿಸಿರುವುದು ನವಜೋಡಿಯು ಸಂಭ್ರಮ ಪಡುವಂತೆ ಮಾಡಿದೆ.