Connect with us

FILM

ಸುದೀಪ್ ತಾಯಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ – ಕಿಚ್ಚನಿಗೆ ಭಾವನಾತ್ಮಕ ಪತ್ರ ಬರೆದ ಮೋದಿ

ಬೆಂಗಳೂರು ಅಕ್ಟೋಬರ್ 28: ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ. ಕಿಚ್ಚ ಸುದೀಪ್ ಅವರಿಗೆ ಬರೆದ ಭಾವನಾತ್ಮಕ ಪತ್ರದಲ್ಲಿ ಕಿಚ್ಚ ಸುದೀಪ್ ಅವರಿಗೆ ದೈರ್ಯ ತುಂಬಿದ್ದಾರೆ.


ನಟ ಸುದೀಪ್ ಅವರ ತಾಯಿ ಸರೋಜಾ ಅವರು ಇತ್ತೀಚೆಗೆ ಅಸೌಖ್ಯದಿಂದ ನಿಧನರಾಗಿದ್ದರು. ಸರೋಜಾ ಅವರ ನಿಧನಕ್ಕೆ ಪ್ರಧಾನಿಯವರು ಪತ್ರದ ಮೂಲಕ ಸಂತಾಪ ಸೂಚಿಸಿದ್ದಾರೆ. ಅಕ್ಟೋಬ‌ರ್ 23ರಂದೇ ಪ್ರಧಾನಿ ನರೇಂದ್ರ ಮೋದಿ ಅವರು ಸುದೀಪ್ ಅವರಿಗೆ ಪತ್ರ ಬರೆದಿದ್ದರು. ಆ ಪತ್ರವನ್ನು ಸದ್ಯ ಸುದೀಪ್ ಅವರು ಈಗ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ‘ನಿಮ್ಮ ಸಾಂತ್ವಾನವು ನನ್ನ ಹೃದಯ ತಟ್ಟಿದೆ’ ಎಂದು ಮೋದಿ ಅವರಿಗೆ ಪ್ರತಿಕ್ರಿಯೆ ಸಲ್ಲಿಸಿದ್ದಾರೆ.

ಪತ್ರದಲ್ಲೇನಿದೆ…

‘ನಿಮ್ಮ ತಾಯಿಯ ನಿಧನ ಸುದ್ದಿ ತಿಳಿದು ತೀವ್ರ ದುಃಖವಾಯಿತು. ತಾಯಿಯನ್ನು ಕಳೆದುಕೊಂಡರೆ ಪ್ರತಿಯೊಬ್ಬರಿಗೂ ತುಂಬಲಾರದ ನಷ್ಟ ಎಂದು ನನಗೆ ಗೊತ್ತು’ ಎಂದು ಪತ್ರದಲ್ಲಿ ಮೋದಿ ಅವರು ಹೇಳಿದ್ದಾರೆ. ‘ಈ ಪ್ರಪಂಚದಲ್ಲಿ ತಾಯಿ ವಾತ್ಸಲ್ಯದ ಮುಂದೆ ಯಾವುದೂ ದೊಡ್ಡದಿಲ್ಲ. ನೀವು ನಿಮ್ಮ ತಾಯಿಯನ್ನು ತುಂಬಾ ಹಚ್ಚಿಕೊಂಡಿದ್ದಿರೆಂದು ಕೇಳಿ ತಿಳಿದುಕೊಂಡೆವು. ಅವರಿಲ್ಲದ ಕ್ಷಣಗಳು ನಿಮಗೆ ನಿಮ್ಮ ಕುಟುಂಬಕ್ಕೂ ತುಂಬ ಕಠಿಣವಾದದ್ದು. ಅವರ ನೆನಪುಗಳು ಸದಾ ನಿಮ್ಮೊಂದಿಗೆ ಇರಲಿವೆ. ಹಾಗೇ ನಮ್ಮೆಲ್ಲರಿಗೂ ಅವರು ಪ್ರೇರಣೆಯಾಗಲಿದ್ದಾರೆ’ ಎಂದು ಹೇಳಿದ್ದಾರೆ. ‘ನಿಮ್ಮ ತಾಯಿ ಅವರ ನಿಧನಕ್ಕೆ ನಮ್ಮ ಸಂತಾಪಗಳು. ಆ ದುಃಖದಿಂದ ನೀವು, ನಿಮ್ಮ ಕುಟುಂಬದವರು ಆದಷ್ಟು ಬೇಗ ಹೊರಗೆ ಬರಲೆಂದು ಪ್ರಾರ್ಥಿಸುತ್ತೇನೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ಸಲ್ಲಿಸಿರುವ ಸುದೀಪ್ ಅವರು, ‘ನಿಮ್ಮ ಸಹಾನುಭೂತಿಯ ಸಂತಾಪ ಪತ್ರಕ್ಕಾಗಿ ನನ್ನ ಪ್ರಾಮಾಣಿಕ ಧನ್ಯವಾದಗಳು. ನಿಮ್ಮ ಚಿಂತನಶೀಲ ಮಾತುಗಳು ಈ ಕಷ್ಟದ ಸಮಯದಲ್ಲಿ ಸಾಂತ್ವಾನದ ಮೂಲಸೆಲೆಯನ್ನು ನೀಡಿದೆ. ನಿಮ್ಮ ಸಾಂತ್ವಾನವು ನನ್ನ ಹೃದಯ ತಟ್ಟಿದೆ. ನಿಮ್ಮ ವಿಶ್ವಾಸಕ್ಕೆ ನಾನು ಆಭಾರಿ’ ಎಂದು ಹೇಳಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *