LATEST NEWS
ಇನ್ನು ಕೊರೊನಾಕ್ಕೆ ಭಯಪಡುವ ಅಗತ್ಯವಿಲ್ಲ – ನರೇಂದ್ರ ಮೋದಿ

ನವದೆಹಲಿ ಅಗಸ್ಟ್ 15 :ಕೊರೊನಾ ಸೊಂಕಿಗೆ ಯಾರೂ ಭಯಪಡುವ ಅಗತ್ಯವಿಲ್ಲ ನಮ್ಮ ದೇಶದಲ್ಲಿ ಒಂದಲ್ಲ ಮೂರು ಲಸಿಕೆಗಳು ತಯಾರಾಗುತ್ತಿದ್ದು. ಲಸಿಕೆ ಉತ್ಪಾದನೆಗೆ ಹಸಿರು ನಿಶಾನೆ ಸಿಕ್ಕಿದ ಬಳಿಕ ಅತ್ಯಧಿಕ ಪ್ರಮಾಣದಲ್ಲಿ ಉತ್ಪಾದನೆ ಮಾಡಿ ಭಾರತೀಯರಿಗೆ ನೀಡಲು ಮಾರ್ಗಸೂಚಿ ಸಹ ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
74ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ 7ನೇ ಬಾರಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ ಭಾಷಣ ಮಾಡಿದ ಮೋದಿ, ಪ್ರತಿಯೊಬ್ಬರು ಕೊರೊನಾಗೆ ಲಸಿಕೆ ಯಾವಾಗ ಬರುತ್ತದೆ ಎಂದು ಕೇಳುತ್ತಿದ್ದಾರೆ. ಆದರೆ ಮೂರು ಲಸಿಕೆಗೆಗಳು ವಿವಿಧ ಹಂತದ ಪ್ರಯೋಗದಲ್ಲಿದೆ. ವಿಜ್ಞಾನಿಗಳಿಂದ ಈ ಲಸಿಕೆಗೆ ಹಸಿರು ನಿಶಾನೆ ಸಿಕ್ಕಿದ ಕೂಡಲೇ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯಾಗಲಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಡಿಜಿಟಲ್ ಹೆಲ್ತ್ ಮಿಷನ್(ಎನ್‌ಡಿಎಚ್‌ಎಂ) ಬಗ್ಗೆ ಮಾತನಾಡಿದ ಮೋದಿ, ಪ್ರತೀ ಭಾರತೀಯರಿಗೆ ಡಿಜಿಟಲ್ ಆರೋಗ್ಯ ಕಾರ್ಡ್ ನೀಡಲು ಸರ್ಕಾರ ಮುಂದಾಗಿದೆ. ರೋಗಿಗಳ ಸಂಪೂರ್ಣ ಚಿಕಿತ್ಸೆಯ ವಿವರ ವೈದ್ಯರಿಗೆ ಇದರಿಂದ ಸಿಗಲಿದೆ ಎಂದು ತಿಳಿಸಿದರು.