Connect with us

UDUPI

ಮೊಬೈಲ್‌ ಕಸಿದು ಪರಾರಿಯಾಗಿದ್ದ ಆರೋಪಿ ಬಂಧನ

ಉಡುಪಿ ಜುಲೈ 23: ಬ್ರಹ್ಮಾವರ ಪರಿಸರದಲ್ಲಿ ಮೊಬೈಲ್‌ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಆತನ ಬಳಿ ಕಳವು ಮಾಡಿದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಉದ್ಯಾವರ ಮಲ್ಪೆ ಪೇಟೆ ನಿವಾಸಿ ಮೊಹಮ್ಮದ್ ಫಹಾದ್‌ ಎಂದು ಗುರುತಿಸಲಾಗಿದೆ.


ಈತನ ಬಳಿಯಿಂದ ಮೊಬೈಲ್‌ ಮತ್ತು ಕೃತ್ಯಕ್ಕೆ ಬಳಸಿದ ಒಂದು ಪಲ್ಸರ್‌ ಬೈಕ್‌ ಸೇರಿ ಒಟ್ಟು 70,000ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಸ್ವಾಧೀಪಡಿಸಿಕೊಳ್ಳಲಾಗಿದೆ. ಬ್ರಹ್ಮಾವರ ತಾಲೂಕು ಹಂದಾಡಿ ಗ್ರಾಮದ ಕಲ್ಲಬೆಟ್ಟುನಲ್ಲಿರುವ ಪಾಂಡುರಂಗ ಪ್ರಭು ರವರ ಮನೆಯ ತಿರುವಿನಲ್ಲಿ ಕುಮಾರಿ ರಕ್ಷಾ ರವರ ಮೊಬೈಲ್‌ ಕಸಿದು ಪರಾರಿಯಾಗಿದ್ದ. ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ರಕ್ಷಾ ರವರ ದೂರಿನಂತೆ ಸುಲಿಗೆ ಪ್ರಕರಣ ದಾಖಲಾಗಿ ಆರೋಪಿಯನ್ನು ಬಂಧಿಸಲಾಗಿದೆ. ಈತನ ವಿರುದ್ಧ ಸುಲಿಗೆ ಮಾಡಿದ ಬಗ್ಗೆ ಮಣಿಪಾಲ ಠಾಣೆಯಲ್ಲಿ, ಗಾಂಜಾ ಮಾರಾಟ ಮಾಡಿದ ಬಗ್ಗೆ ಮಲ್ಪೆ ಠಾಣೆಯಲ್ಲಿ ಮತ್ತು ಗಾಂಜಾ ಸೇವನೆ ಮಾಡಿದ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದೆ.

Facebook Comments

comments