LATEST NEWS
ಹಾಲ್ ಟಿಕೆಟ್ ತರಲು ಕಾಲೇಜ್ ಗೆ ಹೋದ ಯುವತಿ ಪ್ರಿಯಕರನೊಂದಿಗೆ ಪರಾರಿ

ಹಾಲ್ ಟಿಕೆಟ್ ತರಲು ಕಾಲೇಜ್ ಗೆ ಹೋದ ಯುವತಿ ಪ್ರಿಯಕರನೊಂದಿಗೆ ಪರಾರಿ
ಉಡುಪಿ ನವೆಂಬರ್ 5: 18 ವರ್ಷ ಆಗುತ್ತಿದ್ದಂತೆ ತನ್ನ ಪ್ರಿಯಕರನೊಂದಿಗೆ ಕಾಲೇಜು ಯುವತಿ ಪರಾರಿಯಾದ ಘಟನೆ ಕಾರ್ಕಳದಲ್ಲಿ ನಡೆದಿದೆ.
ನಾಪತ್ತೆಯಾದ ಯುವತಿಯನ್ನು 18 ವರ್ಷ ಪ್ರಾಯದ ಸುಧಾ ವಿ ಭಟ್ ಎಂದು ಗುರುತಿಸಲಾಗಿದೆ. ಕಾರ್ಕಳದ ಖಾಸಗಿ ಕಾಲೇಜಿನ ಪ್ರಥಮ ಬಿಸಿಎ ವಿದ್ಯಾರ್ಥಿನಿಯಾಗಿರುವ ಈಕೆ ಕಾರ್ಕಳ ಪೇಟೆಯ ಬಸ್ ನಿಲ್ದಾಣದಲ್ಲಿರುವ ಮೊಬೈಲ್ ಅಂಗಡಿ ಇಟ್ಟುಕೊಂಡಿರುವ ರೋಷನ್ ಪೂಜಾರಿ ಎಂಬಾತನೊಂದಿಗೆ ಪರಾರಿಯಾಗಿದ್ದಾಳೆ ಎಂದು ತಿಳಿದುಬಂದಿದೆ.

ಸುಧಾ ಕಾಲೇಜಿಗೆ ಹೋಗುವಾಗ ರೋಷನ್ ಅವನ ಮೊಬೈಲ್ ಅಂಗಡಿಯಲ್ಲಿ ರಿಚಾರ್ಜ್ ಮಾಡುತ್ತಿದ್ದಳು ಎಂದು ಹೇಳಲಾಗಿದ್ದು, ಈಗಾಗಲೇ ವಿವಾಹಿತನಾಗಿದ್ದ ರೋಷನ್ ನ ಪ್ರೇಮದ ಬಲೆಗೆ ಬಿದ್ದಿದ್ದಾಳೆ. ಆದರೆ ಇವರ ಪ್ರೇಮಕ್ಕೆ ಸುಧಾಳ ವಯಸ್ಸು ಅಡ್ಡಿಯಾಗಿತ್ತು. ಕಾರಣ ಯುವತಿಗೆ ಇನ್ನೂ ಅಪ್ರಾಪ್ತೆಯಾಗಿದ್ದಳು. ಅದಕ್ಕಾಗಿ ಸುಧಾಗೆ 18 ವರ್ಷ ತುಂಬುತ್ತಿದ್ದಂತೆ ಇಬ್ಬರು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ರೋಷನ್ ಯುವತಿಯನ್ನು ಮಣಿಪಾಲದಿಂದ ಝೂಮ್ ಕಾರು ಪಡೆದು ಗೋವಾಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಝೂಮ್ ಕಾರು ಬಿಟ್ಟು ನಂತರ ಮುಂಬಯಿ ಕಡೆ ಪರಾರಿಯಾಗಿರುವ ಸಾದ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುಧಾ ಪೋಷಕರು ರೋಷನ್ ವಿರುದ್ದ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.