Connect with us

    FILM

    “ದಯವಿಟ್ಟು ನನ್ನನ್ನು ಹೊಡೆಯಬೇಡಿ” ಬಾಲಿವುಡ್ ನಟಿ ರವೀನಾ ಟಂಡನ್ ಮೇಲೆ ಗುಂಪಿನಿಂದ ಹಲ್ಲೆ ವಿಡಿಯೋ ವೈರಲ್

    ಮುಂಬೈ ಜೂನ್ 02: ಬಾಲಿವುಡ್ ನಟಿ ರವಿನಾ ಟಂಡನ್  ಮೇಲೆ ಉದ್ರಿಕ್ತ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


    ಶನಿವಾರ ರಾತ್ರಿ ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ರವೀನಾ ಅವರ ಚಾಲಕ ವೇಗವಾಗಿ ಕಾರು ಚಲಾಯಿಸಿ ಮೂವರು ಮಹಿಳೆಯರಿಗೆ ಕಾರನ್ನು ಗುದ್ದಿ ಅಪಘಾತವೆಸಗಿದ್ದಾನೆಂದು ಆರೋಪಿಸಿ, ನೆರೆದಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ವಾಗ್ವಾದ ನಡೆದಿದೆ. ಅದನ್ನು ತಪ್ಪಿಸಲು ರವೀನಾ ಕಾರಿನಿಂದ ಕೆಳಕ್ಕೆ ಇಳಿದಾಗ ಅವರನ್ನು ತಳ್ಳಿ, ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ರವೀನಾ ‘ದಯವಿಟ್ಟು ನನ್ನನ್ನು ಹೊಡೆಯಬೇಡಿ’ ಎಂದಿದ್ದಾರೆ. ಇದೇ ವೇಳೆ ವ್ಯಕ್ತಿಯೊಬ್ಬರು, ರವೀನಾ ಅವರ ಚಾಲಕ ನನ್ನ ತಾಯಿಗೆ ಕಾರನ್ನು ಡಿಕ್ಕಿ ಹೊಡೆಸಿದ್ದಾನೆ. ಇದನ್ನು ಕೇಳಿದ್ದಕ್ಕೆ ನಟಿ ಕಾರಿನಿಂದ ಕೆಳಕ್ಕೆ ಇಳಿದು ತಾಯಿಯ ಮೇಲೆ ಹಲ್ಲೆ ನಡೆಸಿದ್ದಾರೆ. ನಟಿ ಮದ್ಯಪಾನ ಮಾಡಿದ್ದರು ಎಂದು ಆರೋಪಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply